ಆರೋಗ್ಯ

ಭಾರತೀಯರು ಸೆಕ್ಸ್‌ ಪರಿಣಿತರು!

Pinterest LinkedIn Tumblr


ಕಾಂಡೋಮ್ ತಯಾರಿಕಾ ಕಂಪೆನಿಯೊಂದು ನಡೆಸಿದ ಜಾಗತಿಕ ಸರ್ವೆಯೊಂದರಲ್ಲಿ ಭಾರತೀಯರು ಬೆಡ್‍ರೂಮಿನಲ್ಲಿ ಬಹಳಷ್ಟು ಕ್ರಿಯಾಶೀಲರಾಗಿದ್ದಾರೆಂದು ಬಹಿರಂಗವಾಗಿದೆ.

ಸಂಭೋಗಕ್ಕೂ ಮುನ್ನ ಸುಮಾರು 10 ನಿಮಿಷಗಳ ಕಾಲ ಫೋರ್‌ಪ್ಲೇ ಆಡುವ ಭಾರತೀಯರು ಕನಿಷ್ಠ 10 ನಿಮಿಷ ಸಂಭೋಗದಲ್ಲಿ ನಿರತರಾಗಿರುತ್ತಾರೆ.

ಶೇ.72ರಷ್ಟು ಭಾರತೀಯರು ಸೆಕ್ಸ್‌ ಜೀವನದಲ್ಲಿ ತೃಪ್ತಿ ಕಂಡುಕೊಂಡಿದ್ದು ವಿಶ್ವದಲ್ಲೇ ಇದು ಅತ್ಯಂತ ಹೆಚ್ಚು ಎಂದು ಸಮೀಕ್ಷೆ ವೇಳೆ ತಿಳಿದು ಬಂದಿದೆ. ಅಲ್ಲದೇ ಶೇ.79ರಷ್ಟು ಭಾರತೀಯ ಜೋಡಿಗಳು ವಾರದಲ್ಲೊಮ್ಮೆ ಸಂಗಾತಿಯೊಂದಿಗೆ ಸೆಕ್ಸ್‌ ಮಾಡುತ್ತಾರೆ.

ಕನತ್ವ ಕಳೆದುಕೊಳ್ಳುವುದರ ಕುರಿತು ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿರುವ ಭಾರತೀರು, ಕನ್ಯತ್ವ ಕಳೆದುಕೊಳ್ಳಬೇಕು ಎಂಬ ಉದ್ದೇಶವಿರದಿದ್ದರೂ ಹೆಚ್ಚಿನ ಸಂದರ್ಭದಲ್ಲಿ ಆಕಸ್ಮಿಕವಾಗಿ ಕನ್ಯತ್ವ ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಸರ್ವೆಯಲ್ಲಿ ಪಾಲ್ಗೊಂಡ ಹೆಚ್ಚಿನವರು ಮನೆಯಲ್ಲಿ ಮಾತ್ರಾ ಸೆಕ್ಸ್‌ ಮಾಡಲು ಇಚ್ಛೆ ಪಡುತ್ತಾರೆ, ಹೆಚ್ಚಿನವರು ಗರ್ಭಧಾರಣೆ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರುತ್ತಾರಂತೆ

ಕೆಲ ಮಹಿಳೆಯರು ಸೆಕ್ಸ್‌ಗೂ ಮುನ್ನ ಟಾಯ್ಸ್‌ಗಳೊಂದಿಗೆ ಆಟವಾಡಲು ಹಾಗೂ ಇಬ್ಬರೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಬಯಸುವ ಇರಾದೆ ಹೊಂದಿದ್ದಾರಂತೆ

Comments are closed.