ಆರೋಗ್ಯ

ಕಲ್ಲಂಗಡಿ ಹಣ್ಣಿನಲ್ಲಿ ಹಲವಾರು ಪೋಷಕಾಂಶಗಳಿವೆ ಆದರೆ ಅದರ ಬೀಜದಲ್ಲಿ ಏನಿದೇ..?

Pinterest LinkedIn Tumblr

ಕಲ್ಲಂಗಡಿ ಹಣ್ಣು ತಿನ್ನುವುದಕ್ಕೆ ಒಂಥರಾ ಖುಷಿ. ಯಾಕೆಂದರೆ ರುಚಿ ಜೊತೆಗೆ ಸಿಹಿನೀರು ಕುಡಿದ ಅನುಭವ ನಮ್ಮದಾಗುತ್ತದೆ. ಇನ್ನು ಈ ಹಣ್ಣಿನಲ್ಲಿ ಹಲವಾರು ಪೋಷಕಾಂಶಗಳಿವೆ. ಎ, ಬಿ1, ಬಿ6 ಮತ್ತು ಸಿ ವಿಟಮಿನ್‌ಗಳು, ತಾಮ್ರ, ಪೊಟ್ಯಾಷಿಯಂ, ಮ್ಯಾಗ್ನೇಷಿಯಂ, ಪ್ಯಾಂಟೊಥೆನಿಕ್ ಆಮ್ಲ ಮತ್ತು ಬಯೊಟಿನ್‌ ಅಂಶಗಳಿವೆ.

ಹಾಗೆಯೇ ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಫ್ಯಾಟಿ ಆ್ಯಸಿಡ್‌ಗಳು, ಅಗತ್ಯ ಪ್ರೊಟೀನ್‌ಗಳು, ಮ್ಯಾಗ್ನೇಷಿಯಂ, ಪೊಟ್ಯಾಶಿಯಂ, ಮ್ಯಾಂಗನೀಸ್, ಕಬ್ಬಿಣ, ಸತು ಮತ್ತು ರಂಜಕ ದಂತಹ ಖನಿಜಗಳು, ಥಿಯಾಮೈನ್, ನಿನಾಸಿನ್ ಮತ್ತು ಫಾಲೇಟ್‌ಗಳಂತಹ ಬಿ ವಿಟಮಿನ್‌ಗಳಿವೆ.

ಇದು ರಕ್ತನಾಳಗಳ ಸಮರ್ಪಕ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಹಾಗೆಯೇ ಬಿಪಿ, ಗಂಟಲೂತ ಮತ್ತು ನಿಮಿರುವಿಕೆ ದೌರ್ಬಲ್ಯಗಳನ್ನ ನಿವಾರಿಸುತ್ತದೆ. ಕಿಡ್ನಿ ಮತ್ತು ಮೂತ್ರನಾಳ ಸೋಂಕಿಗೆ ಕಲ್ಲಂಗಡಿ ಹಣ್ಣಿನ ಬೀಜಗಳೇ ಚಿಕಿತ್ಸೆ ನೀಡುತ್ತದೆ. ಹಾಗೆಯೇ ಹೃದಯದ ಸಹಜ ಕಾರ್ಯ ನಿರ್ವಹಣೆಗೆ ಬೇಕಾದ ಮ್ಯಾಗ್ನೇಶಿಯಂ ಈ ಬೀಜದಲ್ಲಿದೆ. ಇವು ಬಿಪಿಯನ್ನ ನಿಯಂತ್ರಿಸುತ್ತದೆ. ಹಾಗೂ ಚಯಾಪಚಯ ಪ್ರಕ್ರಿಯೆಯನ್ನು ಉತ್ತೇಜಿಸುತ್ತವೆ.

ಇನ್ನೇನು ಲಾಭವಿದೆ..?
* ಒಂದು ಟೀ ಚಮಚದಷ್ಟು ಒಣ ಮತ್ತು ಹುಡಿ ಮಾಡಿದ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ, ಅದನ್ನು ಮುಕ್ಕಾಲು ಕಪ್ ನೀರಿನಲ್ಲಿ ಹಾಕಿಕೊಂಡು ದಿನಕ್ಕೆರಡು ಬಾರಿ ಸೇವಿಸಬೇಕು. ಹೀಗೆ ಮಾಡಿದ್ದಲ್ಲಿ ಕಾಲುಗಳು ಮತ್ತು ಇತರ ಭಾಗಗಳಲ್ಲಿನ ಊತ ನಿವಾರಣೆಯಾಗುತ್ತದೆ.
*ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಲೀಕೊಪಿನ್ ಎನ್ನುವ ಉತ್ಕರ್ಷಣ ನಿರೋಧಕವಿದೆ. ಇದು ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ.
* ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಉತ್ಕರ್ಷಣ ನಿರೋಧಿ ಗುಣಗಳು ಇರುತ್ತವೆ.
ಇವು ಶರೀರಕ್ಕೆ ವಯಸ್ಸಾಗುವುದನ್ನು ನಿಧಾನಗೊಳಿಸುತ್ತವೆ.
* ಚರ್ಮವನ್ನು ಕಾಂತಿಯುಕ್ತವಾಗಿಸುತ್ತದೆ.
* ಕಲ್ಲಂಗಡಿ ಹಣ್ಣಿನ ಬೀಜದಿಂದ ಎಣ್ಣೆ ತೆಗೆಯಬೇಕು. ಇದನ್ನ ಮುಖಕ್ಕೆ ಹಚ್ಚಿದರೆ ಮೊಡವೆಗಳು, ಕೊಳೆ ಮತ್ತು ಮೃತ ಚರ್ಮ ಜೀವಕೋಶಗಳು ನಿವಾರಣೆಯಾಗುತ್ತವೆ. ಯಾವುದೇ ಬಗೆಯ ಚರ್ಮದವರು ಈ
ಎಣ್ಣೆಯನ್ನ ಬಳಸಬಹುದು.
* ಹುರಿದ ಕಲ್ಲಂಗಡಿ ಹಣ್ಣಿನ ಬೀಜಗಳ ಮೂಲಕ ನೀವು ನಿಮ್ಮ ಕೂದಲಿನ ಬಣ್ಣವನ್ನ ಕಾಪಾಡಬಹುದು‌. ಹಾಗೂ ಕೂದಲಿಗೆ ಹೊಳಪು ನೀಡುತ್ತದೆ. ಯಾಕೆಂದರೆ ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಕೂದಲನ್ನು ಬಲಗೊಳಿಸುವ ಪ್ರೋಟೀನ್ ಮತ್ತು ಅಮಿನೊ ಆ್ಯಸಿಡ್‌ಗಳಿವೆ. ಜೊತೆಗೆ ಈ ಬೀಜದಲ್ಲಿರುವ ಫ್ಯಾಟಿ ಆ್ಯಸಿಡ್ ಕೂದಲಿಗೆ ಹಾನಿಯಾಗುವುದನ್ನು ತಡೆಯುತ್ತವೆ.
* ಈ ಬೀಜಗಳು ನಮ್ಮ ಶರೀರಕ್ಕೆ ಮ್ಯಾಗ್ನೀಶಿಯಂಅನ್ನು ಒದಗಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಬಿ5 ಕಾರ್ಬೊಹೈಡ್ರೇಟ್‌ಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Comments are closed.