ಆರೋಗ್ಯ

ಸಣ್ಣ ಮಕ್ಕಳಿಗೆ ಕಾಡುವತಂಹ ಶೀತ-ಕೆಮ್ಮಿನ ನಿವಾರಣೆಗೆ ಸಿಂಪಲ್ ಮನೆಮದ್ದು.

Pinterest LinkedIn Tumblr

cold_for_baby

* ಆವಿ :
ಸಣ್ಣ ಮಕ್ಕಳಿಗೆ ಶೀತವಾಗಿ ಉಸಿರಾಟಕ್ಕೆ ಕಷ್ಟವಾಗುತ್ತಿದ್ದರೆ ಆಗ ಮಕ್ಕಳಿಗೆ ಆವಿಯ ಚಿಕಿತ್ಸೆ ನೀಡಿ. ಸ್ನಾನ ಕೊಠಡಿಗೆ ಕರೆದುಕೊಂಡು ಹೋಗಿ ಬಿಸಿನೀರನ್ನು ಆನ್ ಮಾಡಿದರೆ ಅದರಿಂದ ಬರುವ ಆವಿಗೆ ಮಗು ಮುಖವೊಡ್ಡಬೇಕು. ಇಲ್ಲವೆಂದಾದರೆ ನೀರನ್ನು ಬಿಸಿ ಮಾಡಿ ಒಂದು ಪಾತ್ರೆಗೆ ಹಾಕಿ. ಅದರಿಂದ ಬರುವ ಆವಿಯನ್ನು ಮಗು ಒಳಕ್ಕೆ ತೆಗೆದುಕೊಂಡರೆ ಒಳ್ಳೆಯದು. ನೀಲಗಿರಿ ಎಣ್ಣೆಯ ಕೆಲವು ಹನಿಗಳನ್ನು ನೀರಿಗೆ ಹಾಕಿದರೆ ಮತ್ತಷ್ಟು ಒಳ್ಳೆಯದು.

* ಜೇನು:
ಜೇನುತುಪ್ಪದಲ್ಲಿ ಶಮನಕಾರಿ ಗುಣಗಳು ಇದೆ ಎಂದು ಎಲ್ಲರಿಗೂ ತಿಳಿದಿದೆ.ಐದು ವರ್ಷಕ್ಕಿಂತ ಚಿಕ್ಕ ಮಕ್ಕಳಾದರೆ ಜೇನಿನಲ್ಲಿ ಮಗುವಿನ ಬೆರಳನ್ನು ಮುಳುಗಿಸಿ ಮತ್ತು ಅದನ್ನು ಚೀಪುವಂತೆ ಹೇಳಿ. ದಿನದಲ್ಲಿ ಎರಡು ಮೂರು ಸಲ ಹೀಗೆ ಮಾಡಿ. ಐದು ವರ್ಷಕ್ಕಿಂತ ದೊಡ್ಡ ಮಗುವಾದರೆ ಜೇನಿಗೆ ಸ್ವಲ್ಪ ದಾಲ್ಚಿನಿ ಹುಡಿಯನ್ನು ಹಾಕಿ ಸವಿಯಲು ಹೇಳಿ.

* ಅಜ್ಮೈನ್:
ಕುದಿಯುವ ನೀರಿಗೆ ಅಜ್ಮೈನ್ ನ ಕೆಲವು ಬೀಜ ಮತ್ತು ತುಳಸಿಯ ಎಲೆಗಳನ್ನು ಹಾಕಿಕೊಂಡು ಕುಡಿದರೆ ಕೆಮ್ಮಿನಿಂದ ಪರಿಹಾರ ಪಡೆಯಬಹುದು. ಎದೆಕಟ್ಟಿ ರುವುದನ್ನು ಇದು ನಿವಾರಣೆ ಮಾಡುತ್ತದೆ.

*ಅರಿಶಿನ ಹಾಲು;
ನಂಜುನಿರೋಧಕ ಗುಣವನ್ನು ಹೊಂದಿರುವಂತಹ ಅರಿಶಿನ ಕೆಮ್ಮು ಹಾಗೂ ಶೀತದಂತಹ ವೈರಲ್ ಸೋಂಕನ್ನು ನಿವಾರಣೆ ಮಾಡುವುದು. ಒಂದು ಲೋಟ ಹಾಲಿಗೆ ಅರಶಿನ ಹಾಕಿ ಮಗುವಿಗೆ ಪ್ರತೀ ರಾತ್ರಿ ನೀಡಿದರೆ ಕೆಮ್ಮು ನಿವಾರಣೆಯಾಗುತ್ತದೆ. ಇದು ಕಿರಿಕಿರಿಯಾಗುವ ಗಂಟಲು ಹಾಗೂ ಕಟ್ಟಿರುವ ಮೂಗಿಗೆ ಶಮನ ನೀಡುವುದು. ಹಾಲಿನಲ್ಲಿ ಕ್ಯಾಲ್ಸಿಯಂ ಇರುವ ಕಾರಣದಿಂದ ಇದು ಮಗುವಿಗೆ ಶಕ್ತಿಯನ್ನು ನೀಡುವುದು.

*ಮಸಾಜ್:
ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಸಾಜ್ ಒಳ್ಳೆಯ ಪರಿಹಾರ. ಸಾಸಿವೆ ಎಣ್ಣೆಗೆ ಬೆಳ್ಳುಳ್ಳಿಯನ್ನು ಹಾಕಿಕೊಂಡು ಮಗುವಿನ ಎದೆ, ಬೆನ್ನು ಹಾಗೂ ಕುತ್ತಿಗೆ ಭಾಗಕ್ಕೆ ಮಸಾಜ್ ಮಾಡಿ. ಮಗುವಿನ ಪಾದ ಹಾಗೂ ಕಾಲಿನ ಭಾಗಕ್ಕೂ ಮಸಾಜ್ ಮಾಡಿಕೊಳ್ಳಿ.ಇದರಿಂದ ಮಕ್ಕಳಿಗೆ ಆರಾಮದಾಯಕ ವಾಗಿರುತ್ತದೆ.

Comments are closed.