1. ಗಾಢ ಹಸಿರು ಬಣ್ಣದ ತರಕಾರಿ:
ಗಾಢ ಹಸಿರು ಬಣ್ಣದ ತರಕಾರಿ ಹಾಗೂ ಸೊಪ್ಪು: ಗಾಢ ಹಸಿರು ಬಣ್ಣದ ತರಕಾರಿಗಳಲ್ಲಿ ವಿಟಮಿನ್ ಡಿ ಅಂಶವಿರುವುದರಿಂದ ಇವುಗಳನ್ನು ಪ್ರತಿನಿತ್ಯದ ಆಹಾರಕ್ರಮದಲ್ಲಿ ಸೇರಿಸಿದರೆ ಮೂಳೆಯ ಆರೋಗ್ಯ ಹೆಚ್ಚಿಸಿಕೊಳ್ಳಬಹುದು.
2. ಈರುಳ್ಳಿ:
ಮೂಳೆಗಳ ಆರೋಗ್ಯಕ್ಕೆ ಸಲ್ಫರ್ ಕೂಡ ಅವಶ್ಯಕ. ಈ ಸಲ್ಫರ್ ಅಂಶ ಈರುಳ್ಳಿ ಹಾಗೂ ಬೆಳ್ಳುಳ್ಳಿಯಲ್ಲಿ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
3. ತಂಪು ಪಾನೀಯಗಳು:
ತಂಪು ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಅಲ್ಲದೆ ಇದನ್ನು ಹೆಚ್ಚಾಗಿ ಕುಡಿಯುತ್ತಿದ್ದರೆ ಈ ಪಾನೀಯಾದಲ್ಲಿರುವ ರಾಸಾಯನಿಕಗಳು ಮೂಳೆಯ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.
4. ಅಧಿಕ ಕೊಬ್ಬಿನಂಶವಿರುವ ಆಹಾರ:
ಅಧಿಕ ಕೊಬ್ಬಿನಂಶವಿರುವ ಮಾಂಸಾಹಾರದಲ್ಲಿ ಪ್ರೊಟೀನ್ ಅಧಿಕವಿರುತ್ತದೆ, ಇದು ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಕಡಿಮೆ ಮಾಡಿ ಮೂಳೆಯ ಆರೋಗ್ಯವನ್ನು ಕಡಿಮೆ ಮಾಡುತ್ತದೆ.
5. ಹಾಲು:
ಹಾಲಿನಲ್ಲಿ ಪೊಟಾಷ್ಯಿಯಂ, ರಂಜಕ ಹಾಗೂ ಕ್ಯಾಲ್ಸಿಯಂ ಇದೆ. ಈ ಅಂಶಗಳು ಮೂಳೆಯ ಆರೋಗ್ಯಕ್ಕೆ ತುಂಬಾ ಅವಶ್ಯಕ. ಆದ್ದರಿಂದ ದಿನದಲ್ಲಿ ಒಂದು ಲೋಟ ಹಾಲು ಕುಡಿಯುವುದು ಒಳ್ಳೆಯದು.
6. ದೇಹದ ತೂಕ ಕಡಿಮೆ ಮಾಡುವುದು;
ದೇಹದ ತೂಕ ಹೆಚ್ಚಾದರೆ ಮಂಡಿ ನೋವು ಕಾಣಿಸಿಕೊಳ್ಳುವುದು. ಆದ್ದರಿಂದ ವ್ಯಾಯಾಮ ಮಾಡಿ ಸಮತೂಕದಲ್ಲಿದ್ದರೆ ಕಾಯಿಲೆಗಳು ದೂರವಾಗುತ್ತವೆ.
7. ಫಿಶ್ ಆಯಿಲ್:
ಮೂಳೆಯ ಆರೋಗ್ಯಕ್ಕೆ ಫಿಶ್ ಆಯಿಲ್ ತುಂಬಾ ಒಳ್ಳೆಯದು. ಈ ರೀತಿಯ ಮಾತ್ರೆಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ.
8. ಫುಟ್ ಬಾಲ್:
ಫುಟ್ ಬಾಲ್ ಆಡಿದಾಗ ಸ್ನಾಯುಗಳು ಬಲವಾಗುತ್ತದೆ ಹಾಗೂ ದೇಹದ ಆರೋಗ್ಯ ಹೆಚ್ಚಾಗುವುದು. ಈ ಆಟವನ್ನು ಚಿಕ್ಕ ವಯಸ್ಸಿನಿಂದಲೇ ಆಡುತ್ತಾ ಬಂದವರಿಗೆ ಮೂಳೆ ಸಂಬಂಧಿ ಕಾಯಿಲೆಗಳು ಕಂಡು ಬರುವ ಸಾಧ್ಯತೆ ಕಡಿಮೆ.