ಆರೋಗ್ಯ

ಬುದ್ದಿವಂತರಿಗಿಂತ , ಬುದ್ದಿ ಸ್ವಲ್ಪ ಕಡಿಮೆಯಾಗಿರುವವರಿಗೆ ಸೆಕ್ಸ್ ನಲ್ಲಿ ಹೆಚ್ಚು ಆಸಕ್ತಿಯಂತೆ..!

Pinterest LinkedIn Tumblr

sex-tip-29

ಈ ವಿಷಯವನ್ನು ಓದಿ ನಾವು ಒಂದು ಕ್ಷಣ ಯೋಚನೆಯಲ್ಲಿ ಬೀಳಬಹುದು. ಆದರೆ ಅಮೇರಿಕದ ಒಂದು ಮ್ಯಾಗಜಿನ್ ಪ್ರಕಟಿಸಿದ ಪ್ರಕಾರ ಇದು ಸತ್ಯ ಸಂಗತಿ. ಈವರೆಗೆ ನೀವು ಓದಿದ ಹಾಗೆ ಜೀವಿಗಳಿಗೆ ಲೈಂಗಿಕತೆ ಎಂಬುದು ಅತಿ ಮುಖ್ಯ. ಲೈಂಗಿಕ ಕ್ರೀಯೆಯ ಮೇಲೆ ದೇಹದ ಆರೋಗ್ಯ ಸ್ಥಿತಿ ಅವಲಂಬಿಸಿರುತ್ತದೆ, ಅದು ನಮ್ಮನ್ನು ಚಟುವಟಿಕೆಯಿಂದಿರಲು ಪ್ರಚೋದಿಸುತ್ತದೆ, ಹಾಗೆ.. ಹೀಗೆ ಎಂದೆಲ್ಲಾ ನೀವು ಓದಿರುತ್ತೀರಿ. ಅದರಲ್ಲೂ ಮಾನವ ಎಂಬ ಈ ಆಶಾ ಜೀವಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಹೆಚ್ಚು ಎನ್ನುಹುದರಲ್ಲಿ ಎರಡು ಮಾತಿಲ್ಲ. ಇತರೆ ಪ್ರಾಣಿಗಳಿಗೆ ಲೈಂಗಿಕತೆ ಒಂದು ಕ್ರಿಯೆ ಅಷ್ಟೆ. ಆದರೆ. ಬುದ್ದಿವಂತ ಪ್ರಾಣಿ ಎನಿಸಿಕೊಂಡಿರುವ ಮನುಜರಲ್ಲಿ ಕೆಲವರಿಗೆ ಲೈಂಗಿಕತೆಯೇ ಜೀವನ ಎಂದು ಭಾವಿಸಿರುತ್ತಾರೆ.

ಲೈಂಗಿಕವಾಗಿ ಸಂತೃಪ್ತಿ ಹೊಂದಿದ ಮನಸ್ಸ್ಸು ಸದಾ ಚಟುವಟಿಕೆಯಿಂದಿರುತ್ತದೆ, ಅದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಮತೋಲನ ಕಾಪಾಡಿಕೊಳ್ಳಲು ಸಹಕರಿಸುತ್ತದೆ ಎಂದು ನೀವು ಓದಿರುತ್ತೀರಿ. ಆದರೆ, ಅಮೇರಿಕದ ಈ ಮ್ಯಾಗಜಿನ್‍ನ ವರದಿ ಇವೆಲ್ಲವುದಕ್ಕೂ ತದ್ವಿರುದ್ಧವಾಗಿದೆ. ಈ ಮ್ಯಾಗಜಿನ್‍ನ ವರದಿ ಪ್ರಕಾರ ಬುದ್ದಿವಂತರಿಗಿಂತ , ಬುದ್ದಿ ಸ್ವಲ್ಪ ಕಡಿಮೆಯಾಗಿರುವವರು ಹೆಚ್ಚು ಸೆಕ್ಸ್ – ಲೈಂಗಿಕ ಅಭಿಲಾಷೆ ಉಳ್ಳವರಾಗಿರುತ್ತಾರೆ. ಕವಿಗಳು, ಪಂಡಿತರು, ವಿಜ್ಞಾನಿಗಳು ಮತ್ತು ಸಾಹಿತಿಗಳಿಗೆ ಶೃಂಗಾರಪರ ಕೋರಿಕೆ ಹೆಚ್ಚಾಗಿರುತ್ತದೆ. ಆದರೆ ಲೈಂಗಕತೆಯಲ್ಲಿ ಅವರ ಭಾಗವಹಿಸುವಿಕೆ ಕಡಿಮೆಯಾಗಿರುತ್ತಂತೆ. ವಾರಕ್ಕೆ ಮೂರು ಬಾರಿ ಲೈಂಗಿಕ ಕ್ರಿಯೆ ನಡೆಸುವ ವ್ಯಕ್ತಿಗೆ 35,000 ಕೀಲೋ ಜೌಲ್ಸ್‍ನಷ್ಟು ಎನರ್ಜಿ ಬರ್ನ್ ಆಗುವುದಂತೆ. ಇದು ವರ್ಷಕ್ಕೆ 130 ಕಿ. ಮೀ ಓಡುವುದರೊಂದಿಗೆ ಸಮಾನ.

ಇದೇ ಎನರ್ಜಿ ಯನ್ನು ಬುದ್ಧಿವಂತರಾದವರು ತಮ್ಮ ಇತರೆ ಕೆಲಸ ಗಳಿಗೆ ಉಪಯೋಸಿ ಕೊಳ್ಳುತ್ತಾರಂತೆ. ಮೊದಲು ಸತತವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡ ಪುರುಷರು ಒಂದು ತಿಂಗಳ ಕಾಲ ಕೆಲಸಗಳ ಒತ್ತಡದಿಂದ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೋಳ್ಳದೆ ಹೋದರೆ, ಅವರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುವುದಂತೆ. ಇದರಿಂದ ಶರೀರದಲ್ಲಿ ಬಿಡುಗಡೆಯಾಗುವ ಆ.ಊ.ಇ.ಂ ಮನುಷ್ಯರನ್ನು ಚುರುಕಿನಿಂದ, ಆರೋಗ್ಯವಾಗಿಯೂ ಲವಲವಿಕೆಯಿಂದಲೂ ಇಡುವುದಂತೆ. ಕೆಲ ನಿಮಿಷಗಳ ಸುಖಕ್ಕಾಗಿ ಆರೋಗ್ಯ, ಆಯಸ್ಸು, ಅವಕಾಶಗಳನ್ನು ಕಳೆದುಕೊಳ್ಳದಿರುವವರೇ ನಿಜವಾದ ಬುದ್ಧಿವಂತರೆಂದು ಈ ಮ್ಯಾಗಜಿನ್ ವರದಿ ಮಾಡಿತ್ತು.
(ಈ ಸಂಜೆ)

Comments are closed.