ಆರೋಗ್ಯ

ಸಂಪಿಗೆ ಹೂವಿನ ಬಳಕೆಯ ವಿಶೇಷತೆ.

Pinterest LinkedIn Tumblr

sampige_flower_1

ಮಂಗಳೂರು: ಸಂಪಿಗೆ – ಒಂದು ಹೂವಿನ ಹೆಸರು. ತೆಳುಹಳದಿ ಬಣ್ಣದ ಈ ಹೂವು ಸಾಮಾನ್ಯವಾಗಿ ಉದ್ಯಾನಗಳಲ್ಲಿ, ಸಸ್ಯೋದ್ಯಾನಗಳಲ್ಲಿ, ದೇವಸ್ಥಾನದೇವಸ್ಥಾನದ ಅಂಗಳದಲ್ಲಿ, ಹಾಗೂ ಕೆಲವರ ಮನೆಗಳ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕಾಣಸಿಗುತ್ತದೆ.

ಸಂಸ್ಕೃತದಲ್ಲಿ ಚಂಪಕ ಸುವರ್ಣ, ತೆಲುಗಿನಲ್ಲಿ ಚಂಪಕಮು, ಇಂಗ್ಲಿಷ್‌ನಲ್ಲಿ ಗೋಲ್ಡನ್ ಚಂಪಕ್ ಎಂದು ಕರೆಸಿಕೊಳ್ಳುವ ಈ ಹೂವಿನ ಸಸ್ಯನಾಮ ಮೈಕೇಲಿಯ ಚಂಪಕ. ೧೭೩೭ ರಲ್ಲಿ ಅಂದಿನ ಪ್ರಸಿದ್ದ ವಿಜ್ಞಾನಿ ಮೈಕೆಲ್ ಪಿ.ಎ. ಅವರು ಕಂಡುಹಿಡಿದುದರಿಂದ ಈ ಹೆಸರು. ವಿವಿಧ ದೇಶಗಳಲ್ಲಿ ಪ್ರಮುಖವಾಗಿ ಶ್ರೀಲಂಕಾ, ಫಿಲಿಪೈನ್ಸ್, ಜಪಾನ್, ಚೀನಾ, ಇಂಡೋನೇಷ್ಯ, ದಕ್ಷಿಣ ಆಫ್ರೀಕಾದ ದಟ್ಟ ಕಾಡುಗಳಲ್ಲಿ ಸಂಪಿಗೆ ಮರ ಬೇರು ಬಿಟ್ಟಿದೆ. ವರ್ಷದ ಮೇ ಅಥವಾ ಅಕ್ಟೋಬರ್ ತಿಂಗಳಲ್ಲಿ ಹೂ ಬಿಡುವುದು. ಕೆಂಡಸಂಪಿಗೆ ಬಹು ಸುವಾಸನೆಯುಳ್ಳದ್ದು. ಬಿಳಿ, ಬೂದು,ಕಡುಹಳದಿ,ನೀಲ ಹಳದಿ ಹೀಗೆ ಹಲವಾರು ಬಣ್ಣಗಳಲ್ಲಿ ಬಿಡುತ್ತದೆ.

sampige_flower_2

ಉಪಯೋಗಗಳು :
ಸಂಪಿಗೆ ಮರವನ್ನು ತೇಗದ ಮರದಂತೆ ಉಪಯೋಗಿಸುತ್ತಾರೆ. ವಿಮಾನ ಹಡಗು ನಿರ್ಮಾಣಕ್ಕೆ, ಮಠಾಧೀಶ್ವರರನ್ನು ಹೊರುವ ಅಡ್ಡಪಲ್ಲಕ್ಕಿ, ಆಟದ ಗೊಂಬೆ, ಬರೆಯುವ ಪೆನ್ಸಿಲ್, ಪ್ಲೈವುಡ್ ಪೀಠೋಪಕರಣಗಳ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ.

ಆಯುರ್ವೇದದಲ್ಲಿ ಇದರ ಬೀಜದಿಂದ ಆರೋಗ್ಯಕಾರಿ ತೈಲವನ್ನು ಉತ್ಪಾದಿಸುತ್ತಾರೆ. ಇದರ ಬೀಜದಿಂದ ಮೇಣವನ್ನೂ ತಯಾರಿಸಲಾಗುತ್ತದೆ. ಸಂಪಿಗೆ ಹೂವಿನ ತೈಲದಲ್ಲಿ ‘ಐಸೊಯುಜಿನಾರ್’ ಎಂಬ ಅಂಶವಿರುತ್ತದೆ. ಮರದ ತೊಗಟೆಯಲ್ಲಿ ಮೀತೈಲ್ ಆಲ್ಕೋಹಾಲ್, ಟ್ಯಾನಿನ್ ಅಂಶಗಳಿರುತ್ತದೆ. ವಿವಿಧ ರೋಗಗಳಿಗೆ ಇದರ ತೊಗಟೆ, ಹೂವಿನ ಪಕಳೆ, ಬೇರು, ಎಲೆ, ಬೀಜ, ಹಸಿಕಾಯಿಗಳಿಂದ ಒಸರುವ ಹಾಲಿನಿಂದ, ಅಂಟು, ಒಣಗಿದ ಚಕ್ಕೆ ಕಡ್ಡಿಯಿಂದ ಔಷಧಿಯನ್ನು ತಯಾರಿಸುತ್ತಾರೆ.

ಸಂಧಿವಾತವಿದ್ದರೆ, ಒಂದು ಕಪ್ ಹರಳೆಣ್ಣೆಯಲ್ಲಿ ಸಂಪಿಗೆಯ ಐದಾರು ಹೂಗಳನ್ನು ಹಾಕಿ ಬೆಚ್ಚಗೆ ಮಾಡಿ ನೋವಿರುವ ಜಾಗಕ್ಕೆ ಸವರಿದರೆ ನೋವು ನಿವಾರಣೆಯಾಗುತ್ತದೆ. ತಲೆಕೂದಲು ಉದುರುತ್ತಿದ್ದರೆ , ಹೊಟ್ಟು ಹೆಚ್ಚಾದರೆ , ನಿಂಬೇಹಣ್ಣಿನ ರಸದಲ್ಲಿ ಸಂಪಿಗೆ ಹೂವುಗಳನ್ನು ರಾತ್ರಿ ಪೂರಾ ನೆನೆಹಾಕಿ ಮುಂಜಾನೆ ಹೂಗಳನ್ನು ಹಿಸುಕಿ ತೆಗೆದು ತಲೆಕೂದಲಿನ ಬುಡಕ್ಕೆ ಹಚ್ಚಿ.

Comments are closed.