ಆರೋಗ್ಯ

ಉತ್ತಮ ಆರೋಗ್ಯಕರ ಜೀವನ ನಿಮ್ಮದಾಗಿಸಲು ಈ ರೀತಿ ಮಾಡಿ

Pinterest LinkedIn Tumblr

molakebanda_kalu_1

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಜನರ ಜೀವನವಂತೂ ಕಾಲಿಗೆ ಕಟ್ಟ ಚಕ್ರದಂತೆ ಒಂದು ನೀಮಿಷ ನಿಲ್ಲೋದಿಲ್ಲ. ತಮ್ಮ ತಮ್ಮ ಆರೋಗ್ಯದ ಮೇಲೆ ಕಾಳಜಿವಹಿಸಲು ಅವರಿಗೆ ಸಾಧ್ಯವಾಗದಷ್ಠು ಬ್ಯುಸಿಯಾಗಿಬಿಟ್ಟಿರುತ್ತಾರೆ.ಅದಕ್ಕಾಗಿ ಈ ಲೇಖನವನ್ನು ಓದಿ,… ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ… ಆರೋಗ್ಯವಿದ್ದರೆ ಎಲ್ಲವೂ ಇದ್ದಂತೆ.

ಮೊಳಕೆಬಂದ ಕಾಳುಗಳು:
ದ್ವಿಧಳ ಧಾನ್ಯದ ಕಾಳುಗಳನ್ನು ಮೊಳಕೆ ಕಟ್ಟಿ ತಿಂದಾಗ ನಮ್ಮ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳು ದೊರೆಯುತ್ತವೆ. ದೇಹವನ್ನ ಸಮತೋಲ ಕಾಯುತ್ತದೆ.ಹಸಿಯಾದ ಮೊಳಕೆಕಾಳುಗಳನ್ನು ಸ್ವಲ್ಪ ಹಬೆಯಲ್ಲಿ ಬೇಯಿಸಿ ಅದಕ್ಕೆ ಸ್ವಲ್ಪ ಕ್ಯಾರೆಟ್ ತುರಿಯನ್ನು ಮಿಶ್ರಣಮಾಡಿ ಅದಕ್ಕೆ ತಕ್ಕ ಸ್ವಲ್ಪ ಉಪ್ಪು ನಿಂಬೆ ರಸ ಬೆರಸಿ ತಿಂದರೆ, ದೇಹದ ಶಕ್ತಿ ವೃದ್ಧಿಯಾಗುತ್ತದೆ. ಇದು ಸಕ್ಕರೆ ಖಾಯಿಲೆ ಇದ್ದವರು ತಿಂದರೆ ಒಳ್ಳಯದು. ಜೀರ್ಣಶಕ್ತಿ ಹೆಚ್ಚಾಗುತ್ತದೆ. ಹಲ್ಲುಗಳು ಶುಭ್ರವಾಗಿತ್ತದೆ.

mustred_seed_1

ಸಾಸಿವೆ(ಮಸ್ಟರ್ಡ್):
ಹಲ್ಲು ನೋವಿರುವವರು ಸ್ವಲ್ಪ ಸಾಸಿವೆ ಕಾಳನ್ನು ಅಗಿದು ಸ್ವಲ್ಪ ಹೊತ್ತಿನ ನಂತರ ಉಗಿಯಬೇಕು. ಇದರಿಂದ ಹಲ್ಲುನೋವು ನಿವಾರಣೆಯಾಗುತ್ತದೆ. ಜತೆಗೆ ಹಸಿವನ್ನೂ ಹೆಚ್ಚಿಸುತ್ತದೆ. ಉಪ್ಪಿನಕಾಯಿಯಲ್ಲಿ ಸಾಸಿವೆಯನ್ನು ಸ್ವಲ್ಪ ಹೆಚ್ಚು ಬಳಸಿದರೆ, ಬೇಗ ಕೆಡುವುದಿಲ್ಲ. ಸಾಮಾನ್ಯವಾಗಿ ಉಪ್ಪಿನಕಾಯಿ ಹಾಳಾಗಲು ಆಸ್ಟರ್ಜಲಿನ್ ಎಂಬ ಶಿಲೀಂದ್ರ ಕಾರಣವಾಗಿದ್ದು, ಇದು ಬೆಳೆಯುವುದನ್ನು ಸಾಸಿವೆ ತಡೆಯುತ್ತದೆ.

Oil_health_photo_4

ಸಾಸುವೆ ಎಣ್ಣೆ:
ಸಾಸುವೆ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಎರಡು ಗಂಟೆಯವರೆಗೆ ಎಳೆ ಬಿಸಿಲಿನಲಿದ್ದು ನಂತರ ಸ್ನಾನ ಮಾಡಿದರೆ ರಿಕೆಟ್ಸ್ ರೂಗದಿಂದ ಗುಣಮುಕ್ತರಾಗುವಿರಿ. ವಿಷ ಪೂರಿತ ಆಹಾರವನ್ನು ಸೇವಿಸಿದ್ದರೆ ತಕ್ಷಣ ಸಾಸುವೆ ಪುಡಿಯನ್ನು ನೀರಿಗೆ ಹಾಕಿ ಕುಡಿಸಿದರೆ, ವಾಂತಿಯಾಗಿ ವಿಷ ಆಹಾರ ಹೊರ ಬರುತ್ತದೆ. ಹಲ್ಲು ನೋವು ಕಾಣಿಸಿಕೊಂಡಾಗ ಸಾಸುವೆಯನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗೆದು ಉಗಿಯುವುದರಿಂದಲೂ ಹಲ್ಲಿನ ನೋವು ಉಪಶಮನವಾಗುತ್ತದೆ.

indian_black_berry_or_java_plum

ನೇರಳೇ ಹಣ್ಣು:
ನೇರಳೇ ಹಣ್ಣು ತಿನ್ನುವುದರಿಂದ ದೇಹಕ್ಕೆ ಹಲವಾರು ಉಪಯೋಗಗಳು ಆಗುತ್ತವೆ. ಜೇನು ತುಪ್ಪದ ಜೊತೆ ನೇರಳೇ ಹಣೀನ ಶರಬತ್ತನ್ನು ಸೇರಸಿ ಕುಡಿದರೆ ಅಂಗೈ, ಅಂಗಾಲು ಉರಿ ಶಮನ ಕಡಿಮೆ ಆಗಿ ನಿದ್ರೆ ಚನ್ನಾಗಿ ಬರುತ್ತದೆ.ಹಣ್ಣಿನ ಶರಬತ್ತು ಕುಡಿಯುವುದರಿಂದ ಭೇದಿ ನಿಲ್ಲುತ್ತದೆ.ಅತಿಸಾರ, ಆಮಶಂಕೆ, ಮತ್ತು ಮೂಲವ್ಯಾಧಿ ಇರುವವರು ದಿನಕ್ಕೆ ಮೂರು ಬಾರಿ ನೇರಳೇ ಮರದ ಎಲೆಯ ಕಷಾಯವನ್ನು ಊಟವಾದನಂತರ ಕುಡಿದರೆ ಗುಣವಾಗುತ್ತದೆ.

ladys_finger_photo

ಬೆಂಡೆಕಾಯಿ:
ಅಡುಗೆಯಲ್ಲಿ ಬೆಂಡೆಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ಮಲಬದ್ದತೆ ಗ್ಯಾಸ್ ಸಮಸ್ಯೆ ಹೊಟ್ಟೆ ಉಬ್ಬರ ಸಮಸ್ಯೆಗಳನ್ನು ತಡೆಯಬಹುದು .ಅತಿಸಾರ ವಾಂತಿ ಅದಾಗ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಎಳನೀರು ಕುಡಿಯುವುದರಿಂದ ಆಯಾಸ ನಿವಾರಣೆಯಾಗುತ್ತದೆ.ಪ್ರತಿದಿನ ಊಟವಾದ ನಂತರ ಒಂದು ಏಲಕ್ಕಿ ಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.ಅಹಾರದಲ್ಲಿ ನಿಯಮಿತವಾಗಿ ಪಾಲಾಕ್ ಸೊಪ್ಪನ್ನು ಬಳಸುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ತಡೆಯಬಹುದು.

ganji_pored_photo

ಅಂಬಲಿ:
ಪ್ರತಿದಿನ ಬೆಳಗ್ಗೆ ಒಂದು ಲೋಟರಾಗಿ ಅಂಬಲಿ ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.ಪ್ರತಿದಿನ ಗಟ್ಟಿಮೊಸರನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.
ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿಹಾಲು ಕುಡಿಯುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.ಅಡುಗೆಯಲ್ಲಿ ನಿಯಮಿತವಾಗಿ ಕಾಳುಮೆಣಸಿನ ಪುಡಿಯನ್ನು ಬಳಸುವುದರಿಂದ ಹೊಟ್ಟೆ ಉಬ್ಬರದ ಬಾಧೆ ನಿವಾರಣೆಯಾಗುತ್ತದೆ. ಲೆಯಲ್ಲಿ ತುರಿಕೆ ಕಂಡು ಬಂದಾಗ ಬೇವಿನ ಎಲೆಯನ್ನು ಅರೆದು ಹಚ್ಚಿಕೊಂಡು 10 ನಿಮಿಷದ ನಂತರ ತಲೆಯನ್ನು ತೊಳೆದುಕೊಳ್ಳಬೇಕು.

bitter_gourd_a

ಹಾಗಲಕಾಯಿ:
ಹಾಗಲಕಾಯಿಯ ನಿಯಮಿತ ಬಳಕೆಯಿಂದ ಮೂತ್ರಕೋಶದಲ್ಲಿ ಕಲ್ಲು ಉತ್ಪತ್ತಿಯಾಗುವುದನ್ನು ತಡೆಗಟ್ಟಬಹುದು. ಮೆಧುಮೇಹ ನಿಯಂತ್ರಣಕ್ಕೆ ಸಹಕಾರಿ.ಆಹಾರದಲ್ಲಿ ನಿಯಮಿತವಾಗಿ ಮೆಂತ್ಯಸೋಪ್ಪನ್ನು ಬಳಸುವುದರಿಂದ ಮಧುಮೇಹನಿಯಂತ್ರಣದಲ್ಲಿರುತ್ತದೆ.ಕೊಬ್ಬಿನ ಅಂಶ ಕಡಿಮೆ ಇರುವ ಹಾಲಿನ ಉತ್ಪನ್ನಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮದ್ಯವಯಸ್ಸಿನಲ್ಲಿ ಬರಬಹುದಾದ ಮಧುಮೇಹ ವನ್ನು ನಿಯಂತ್ರಿಸಬಹುದು

Comments are closed.