ಅಂತರಾಷ್ಟ್ರೀಯ

ಎಲ್ಲರನ್ನೂ ಕಾಡುವ ಅಸಿಡಿಟಿಗೆ ಮನೆಮದ್ದು….

Pinterest LinkedIn Tumblr

acidity

ಅಸಿಡಿಟಿ ಎಲ್ಲರನ್ನೂ ಕಾಡುವ ಒಂದು ಸಾಮಾನ್ಯ ಸಮಸ್ಯೆ. ಸ್ವಲ್ಪ ಜಾಸ್ತಿ ಊಟ ಮಾಡಿದರೂ, ಇಲ್ಲವೇ ಕಡಿಮೆ ತಿಂದರೂ ಆಸಿಡಿಟಿ ಯಿಂದ ಬಳಲುವವರ ಸಂಖ್ಯೆ ಇದೀಗ ಕಡಿಮೆಯೇನಿಲ್ಲ. ಇಂತಹ ಸಮಸ್ಯೆ ಹೊಡೆದೋಡಿಸಲು ಔಷಧಿಯ ಮೊರೆ ಹೋಗುವುದಕ್ಕಿಂತ ಮನೆಯಲ್ಲೇ ಸಿಗುವ ಮನೆಮದ್ದಿನಿಂದ ಉಪಶಮನ ಕಾಣುವುದು ಸೂಕ್ತ. ಹೊಟ್ಟೆ ಉಬ್ಬರದಂತಹ ಸಮಸ್ಯೆ ಕಾಡಿದಾಗ ಮತ್ತೇನನ್ನೂ ತಿನ್ನಲು ಮನಸ್ಸಾಗುವುದಿಲ್ಲ. ಹಾಗೆಯೇ ಒಂದಿಷ್ಟು ಕಡಿಮೆ ತಿಂದರೂ ಸಹಿಸಲಸಾಧ್ಯವಾದ ತಳಮಳ. ಇದನ್ನು ಅನುಭವಿಸುವವರ ಪಾಡು ಮಾತ್ರ ಹೇಳತೀರದು.

ಇದಕ್ಕಾಗೇ ಇದೆ ಕೆಲವೊಂದು ಟಿಪ್ಸ್ ಇಲ್ಲಿವೆ ನೋಡಿ.
* ಒಂದು ಲೋಟ ಬಿಸಿ ನೀರಿಗೆ, ಕಾಳುಮೆಣಸಿನ ಪುಡಿ ಹಾಗೂ ನಿಂಬು ರಸವನ್ನು ಬೆರೆಸಿ, ಪ್ರತಿದಿನ ಬೆಳಗ್ಗೆ ಕುಡಿಯುತ್ತ ಬನ್ನಿ.

* ಸಲಾಡ್ ರೂಪದಲ್ಲಿ ಮೂಲಂಗಿಯನ್ನು ಸೇವಿಸುತ್ತ ಬನ್ನಿ. ಅದಕ್ಕೆ ಕಾಳು ಮೆಣಸಿನ ಪುಡಿ ಮತ್ತು ಉಪ್ಪು ಬೆರೆಸಿ ಸೇವಿಸಿ.

* ಜಾಯಿಕಾಯಿ ಮತ್ತು ಶುಂಠಿ ಚೂರ್ಣವನ್ನು ಪ್ರತಿದಿನ ಸ್ವಲ್ಪ ಸೇವಿಸುತ್ತಿದ್ದರೆ ಅಸಿಡಿಟಿ ಕಡಿಮೆಯಾಗುತ್ತದೆ.

* ಊಟದ ನಂತರ ಒಂದು ಚಮಚ ಜೀರಿಗೆ ಸೇವನೆಯಿಂದಲೂ ಅಸಿಡಿಟಿ ಕಡಿಮೆಯಾಗುತ್ತದೆ.

* ತಣ್ಣನೆ ಹಾಲು ಸೇವಿಸಿ

* ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವಿಸುತ್ತ ಬಂದರೆ ಆಮ್ಲದ ಸಮಸ್ಯೆ ದೂರವಾಗುತ್ತದೆ.

* ಎಳನೀರು ಕೂಡ ಅಸಿಡಿಟಿ ಹೋಗಲಾಡಿಸಲು ಉತ್ತಮ

* ಲವಂಗ ಜಗಿಯುವುದರಿಂದಲೂ ಅಸಿಡಿಟಿ ಸಮಸ್ಯೆಯಿಂದ ಮುಕ್ತ ಹೊಂದಬಹುದು.

ಮನೆಯಲ್ಲೇ ಸಿಗುವಂತಹ ಕಾಳುಮೆಣಸು, ನಿಂಬೆರಸ, ಜಾಯಿಕಾಯಿ, ಹಸಿ ತರಕಾರಿಗಳಾದ ಮೂಲಂಗಿ, ಶುಂಠಿ, ಎಳನೀರು, ಲವಂಗ ಇನ್ನಿತರ ಆಹಾರ ಪದಾರ್ಥಗಳಿಂದ ಇಂತಹ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುವುದನ್ನು ತಪ್ಪಿಸಬಹುದು.

Comments are closed.