ಕಣ್ಣು ಎಲ್ಲರಿಗೂ ಬೇಕೇ ಬೇಕು. ನಿಮ್ಮ ಕಣ್ಣಿನ ರಕ್ಷಣೆ ಮಾಡಲು ಯಾವುದಾದರೂ ವ್ಯಾಯಾಮ ಮಾಡಿದರೆ ಸಾಕಾಗುವುದಿಲ್ಲ ಬದಲಿಗೆ ಕಣ್ಣಿನ ಆರೋಗ್ಯ ಸುಧಾರಿಸಲು ಈ ಕೆಳಗಿನ ಆಹಾರಗಳನ್ನು ಸೇವಿಸಬೇಕಾಗುತ್ತದೆ.
ಬಂಗಡೆ, ಸಲ್ಮನ್ ಮೀನುಗಳು ಕಣ್ಣು ಒಣಗುವುದನ್ನು ತಪ್ಪಿಸಿ ಅಕ್ಷಪಟಲದ ಅವನತಿಯಾಗದಂತೆ ನೋಡಿಕೊಳ್ಳುತ್ತವೆ. ಹೂಕೋಸು, ಎಲೆಕೋಸು, ಕ್ಯಾರೆಟ್, ಬೀನ್ಸ್, ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ.
ಮೊಟ್ಟೆಯಲ್ಲಿ ವಿಟಮಿನ್ ಎ, ಡಿ, ಬಿ6, ಬಿ12 ಇರುವುದರಿಂದ ಇದು ಇರುಳುಗುರುಡನ್ನು ತಡೆಯುತ್ತದೆ. ಮತ್ತು ಕಣ್ಣು ಒಣಗುವುದನ್ನು ತಡೆಯುತ್ತದೆ. ಗೋಧಿ, ರಾಗಿ, ಓಟ್ಸ್, ಜೋಳ, ಬಾರ್ಲಿ, ಅಕ್ಕಿ ಮತ್ತು ಧಾನ್ಯಗಳನ್ನು ತಿನ್ನುವುದು ಕಣ್ಣಿಗೆ ಬಹಳ ಉಪಯೋಗಕಾರಿ, ಕಿತ್ತಳೆ, ನಿಂಬೆ ಹಣ್ಣುಗಳಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿವೆ. ಬಾದಾಮಿ ಪಿಸ್ತಾ ಸೇವನೆ ಕೂಡಾ ದೃಷ್ಠಿದೋಷವನ್ನು ನಿವಾರಿಸುತ್ತವೆ.
Comments are closed.