ರಾಷ್ಟ್ರೀಯ

ಬಂಗಾಳದಲ್ಲೂ ಹೆಣ್ಮಕ್ಕಳಿಗಾಗಿ ಕಡಿಮೆ ಬೆಲೆಗೆ ‘ಸಾಥಿ’ ಸ್ಯಾನಿಟರಿ ಪ್ಯಾಡ್

Pinterest LinkedIn Tumblr


ಕೋಲ್ಕತ್ತಾ: ಕೇರಳದ ಬಳಿಕ ಪಶ್ಚಿಮ ಬಂಗಾಳದಲ್ಲೂ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಹೆಣ್ಮಕ್ಕಳನ್ನು ತಲುಪಲಿದೆ. ಅತಿ ಶೀಘ್ರದಲ್ಲೇ ‘ಸಾಥಿ’ ಎಂಬ ಮಹತ್ತರ ಯೋಜನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಾಲನೆ ನೀಡಲಿದ್ದಾರೆ.

ಪಶ್ಚಿಮ ಬಂಗಳಾದ ಶಾಲಾ, ಕಾಲೇಜುಗಳಲ್ಲಿ ಸ್ಯಾನಿಟರಿ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಸಾಥಿ ಯೋಜನೆಯಡಿಯಲ್ಲಿ ಕೇವಲ ಆರು ರೂ.ಗಳಿಗೆ ಆರು ಸ್ಯಾನಿಟರಿ ನ್ಯಾಪ್‌ಕಿನ್‌ಗಳು ದೊರಕಲಿದೆ.

ಮಾರುಕಟ್ಟೆಯಲ್ಲಿ ದೊರಕುವ ಮಹಿಳೆಯ ಅತಿ ಅಗತ್ಯ ವಸ್ತುವಾದ ಸ್ಯಾನಿಟರಿ ಪ್ಯಾಡ್‌ಗಳು 20ರಿಂದ 30 ರೂ.ಗಳಷ್ಟು ದುಬಾರಿಯೆನಿಸುತ್ತದೆ. ಬಡ ಹೆಣ್ಮಕ್ಕಳಿಗೆ ಇದನ್ನು ಖರೀದಿಸುವುದು ಕಷ್ಟಕರವಾಗಿದೆ. ಆದರೆ ಈ ಎಲ್ಲ ಸಮಸ್ಯೆಗಳಿಗೆ ಸಾಥಿ ಯೋಜನೆಯ ಮೂಲಕ ಪರಿಹಾರ ಸಿಗಲಿದೆ.

ಗ್ರಾಮಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬಳಕೆಯ ಬಗ್ಗೆ ಅರಿವು ಮೂಡಿಸಲಾಗುವುದು. ಋತು ಚಕ್ರದ ಸಮಯದಲ್ಲಿ ನ್ಯಾಪ್‌ಕಿನ್‌ಗಳ ಬಳಕೆಯ ಬಗ್ಗೆಯೂ ವಿವರಿಸಲಾಗುವುದು.

ಅಂದ ಹಾಗೆ ಸರಕಾರದ ಯೋಜನೆಯನ್ನು ಹೆಣ್ಮಕ್ಕಳು ಸೇರಿದಂತೆ ಬಂಗಾಳ ಜನತೆಯು ಸ್ವಾಗತಿಸಿದ್ದಾರೆ. ಒಟ್ಟಿನಲ್ಲಿ ಪ್ಯಾಡ್ ಮ್ಯಾನ್ ಬಳಿಕ ಬಂಗಾಳವು ‘ಪ್ಯಾಡ್ ದೀದಿ’ ಪಡೆದಂತಾಗಿದೆ.

Comments are closed.