ಕರ್ನಾಟಕ

ಕೂಡ್ಲಿಗಿಯಲ್ಲಿ ಹೊಸ ಪಕ್ಷ ಘೋಷಿಸಿದ ಮಾಜಿ ಡಿವೈಎಸ್​ಪಿ ಅನುಪಮಾ ಶೆಣೈ

Pinterest LinkedIn Tumblr

ಬಳ್ಳಾರಿ: ಮಂಗಳವಾರವಷ್ಟೇ ನಟ ಉಪೇಂದ್ರ ತಮ್ಮ ಹೊಸ ಪಕ್ಷ ಘೋಷಿಸಿದ್ದರು. ಅದರ ಬೆನ್ನಲ್ಲಿಯೇ ಮಾಜಿ ಡಿವೈಎಸ್​ಪಿ ಅನುಪಮಾ ಶೆಣೈ ಇಲ್ಲಿ ತಮ್ಮ ಹೊಸ ಪಕ್ಷ ಘೋಷಿಸಿದ್ದಾರೆ. ಜನರಿಗಾಗಿಯೇ ಈ ಪಕ್ಷ ಸ್ಥಾಪಿಸಿದ್ದೇನೆ ಎಂದಿರುವ ಅವರು ಬ್ಯಾನರ್​ ಅನಾವರಣ ಮಾಡುವ ಮೂಲಕ ಪಕ್ಷದ ಹೆಸರು ಘೋಷಿಸಿದರು.

‘ಭಾರತೀಯ ಜನಶಕ್ತಿ ಕಾಂಗ್ರೆಸ್’ ಎಂದು ಅನುಪಮಾ ಶೆಣೈ ತಮ್ಮ ಪಕ್ಷಕ್ಕೆ ಹೆಸರಿಟ್ಟಿದ್ದಾರೆ. ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಟಿಐ ಕಾರ್ಯಕರ್ತ ರಾಜಶೇಖರ ಮುಲಾಲಿ ಪಕ್ಷವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಮುಲಾಲಿ, ಬೇರೆಯವರು ಪಕ್ಷ ಕಟ್ಟಿದ್ದು ಸ್ವಾರ್ಥಕ್ಕಾಗಿ ಅಥವಾ ಪಕ್ಷದಲ್ಲಿ ತಮಗೆ ಅನ್ಯಾಯವಾದಾಗ. ಆದರೆ ಇದು ಹಾಗಲ್ಲ, ಜನರಿಗಾಗಿಯೇ ಹುಟ್ಟಿದ ಪಕ್ಷ ಇದಾಗಿದೆ ಎಂದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅನುಪಮಾ ಶೆಣೈ, ಸಚಿವ ಡಿ.ಕೆ. ಶಿವಕುಮಾರ್ ಹಿಂದೊಮ್ಮೆ ನೀವ್ಯಾಕೆ ರಾಜಕೀಯಕ್ಕೆ ಬರಬಾರದು ಎಂದಿದ್ದರು. ಶಕ್ತಿ ಸಚಿವ, ಶಿವನ ಅವಾತರ ಇರುವ ಡಿಕೆಶಿ ಅವರ ಮಾತು ಇಂದು ನಿಜವಾಗಿದೆ ಎಂದರು.

Comments are closed.