ಕ್ರೀಡೆ

ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ; ಏಕದಿನ ಪಂದ್ಯದಲ್ಲಿ ಅತ್ಯಂತ ವೇಗವಾಗಿ 12,000 ರನ್ ಗಳಿಸಿದ ಸಾಧನೆ

Pinterest LinkedIn Tumblr

ಕ್ಯಾನ್ಬೆರಾ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆ ಮುರಿದು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅತ್ಯಂತ ವೇಗವಾಗಿ 12,000 ಏಕದಿನ ರನ್ ಗಳಿಸಿದ ಜಗತ್ತಿನ ಮೊದಲ ಕ್ರಿಕೆಟಿಗ ಎನ್ನುವ ವಿಶ್ವದಾಖಲೆಗೆ ಕೊಹ್ಲಿ ಪಾತ್ರವಾಗಿದ್ದಾರೆ.

ಈ ವಿಶೇಷ ದಾಖಲೆಗಾಗಿ ಕೊಹ್ಲಿಗೆ 23 ರನ್‌ಗಳ ಅಗತ್ಯವಿತ್ತು, ಇಂದಿನ ಪಂದ್ಯದಲ್ಲಿ ಕೊಹ್ಲಿ, ತಮ್ಮ 242 ನೇ ಇನ್ನಿಂಗ್ಸ್‌ನಲ್ಲಿ ಭಾರತದ ಇನ್ನಿಂಗ್ಸ್‌ನ 13 ನೇ ಓವರ್‌ನಲ್ಲಿ ಸೀನ್ ಅಬೊಟ್ಟ್ ಅವರ ಬೌಲಿಂಗ್ ವೇಳೆ ಈ ಮೈಲಿಗಲ್ಲು ತಲುಪಿದರು.

ಈ ಹಿಂದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ಈ ಸಾಧನೆಯನ್ನು ಮಾಡಲು 300 ಪಂದ್ಯಗಳಷ್ಟು ಕಾಲಾವಕಾಶ ತೆಗೆದುಕೊಂಡಿದ್ದರು.

ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ತನ್ನ ವೃತ್ತಿ ಜೀವನದ 251 ನೇ ಏಕದಿನ ಪಂದ್ಯದಲ್ಲಿ ಆಡುತ್ತಿದ್ದಾನೆದ್ದಾರೆ. ಅವರು ಇದುವರೆಗೆ 43 ಶತಕ ಹಾಗೂ 59 ಅರ್ಧಶತಕಗಳಿಂದಿಗೆ 60 ರನ್ ಗಳ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ.ಕೊಹ್ಲಿ 2008 ರಲ್ಲಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು.

ಸಚಿನ್ 1989 ಮತ್ತು 2012 ರ ನಡುವೆ 463 ಏಕದಿನ ಪಂದ್ಯಗಳಿಂದ 49 ಶತಕ ಮತ್ತು 96 ಅರ್ಧಶತಕಗಳ ಸಹಾಯದಿಂದ 44.83 ಸರಾಸರಿಯಲ್ಲಿ 18426 ರನ್ ಗಳಿಸಿದರು.

Comments are closed.