ಕ್ರೀಡೆ

ಮದುವೆಗೆ ಮೊದಲು ಟ್ವೀಟ್ ಮಾಡಿ ಟ್ರೋಲ್‌ಗೆ ಗುರಿಯಾದ ಪಾಕ್ ಕ್ರಿಕೆಟಿಗ ಹಸನ್ ಅಲಿ!

Pinterest LinkedIn Tumblr


ಹೊಸದಿಲ್ಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಹಸನ್ ಅಲಿ, ಭಾರತೀಯ ಮೂಲದ ಯುವತಿಯನ್ನು ವಿವಾಹವಾಗಿದ್ದಾರೆ.

ಈ ನಡುವೆ ಮದುವೆಗೂ ಮುನ್ನ ‘ಬ್ಯಾಚುಲರ್ ಆಗಿ ಕಡೆಯ ರಾತ್ರಿ’ ಎಂಬ ಹೇಳಿಕೆ ನೀಡಿ ಭಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಹಸನ್ ಟ್ವೀಟ್‌ಗೆ ಕ್ರೀಡಾಭಿಮಾನಿಗಳು ವ್ಯಾಪಕ ವ್ಯಂಗ್ಯ ಮಾಡಿದ್ದಾರೆ.

ಈ ಹಿಂದೆ ಭಾರತ ಹಾಗೂ ಪಾಕಿಸ್ತಾನ ನಡುವೆ ಗಡಿ ಹಂಚಿಕೆ ಪ್ರದೇಶವಾದ ವಾಘಾ ಗಡಿಯಲ್ಲಿ ಧ್ವಜ ಗೌರವ ಸಂದರ್ಭದಲ್ಲಿ ಭಾರತೀಯ ಸೈನಿಕರ ವಿರುದ್ಧ ತೊಡೆ ತಟ್ಟುವ ಮೂಲಕ ಪ್ರಚೋದಿಸಿದ್ದರು. ಇದರ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗಿದ್ದವು.

ಇದೀಗ ಭಾರತೀಯ ಮೂಲದವರೇ ಆಗಿರುವ ಯುವತಿಯನ್ನು ವಿವಾಹವಾಗಲು ಮುಂದಾಗಿದ್ದಾರೆ. ಹರಿಯಾಣ ಮೂಲದ ಶಮಿಯಾ ಅರ್ಝೂ ಅವರನ್ನು ಹಸನ್ ವರಿಸುತ್ತಿದ್ದಾರೆ.

ಈ ನಡುವೆ ಹಸನ್ ಅಲಿ ಹಾಗೂ ಶಮಿಯಾ ಚಿತ್ರಗಳು ವೈರಲ್ ಆಗಿ ಹರಡಿದೆ. ದುಬೈನಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿದ್ದು, ಪಾಕಿಸ್ತಾನ ಕ್ರಿಕೆಟಿಗರು ಭಾಗವಹಿಸಿದ್ದರು.

Comments are closed.