ಕ್ರೀಡೆ

ಕ್ರಿಕೆಟ್‌ ಬದುಕಿನ 11ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಾವನಾತ್ಮಕ ಟ್ವೀಟ್‌ ಮಾಡಿದ ಕೊಹ್ಲಿ !

Pinterest LinkedIn Tumblr

ನವದೆಹಲಿ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನ 11ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರು ಭಾವನಾತ್ಮಕ ಟ್ವೀಟ್‌ ಮಾಡಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಳೆಯ ಫೋಟೋವೊಂದನ್ನು ಅಪ್ಲೋಡ್ ಮಾಡಿರುವ ಕೊಹ್ಲಿ, ‘2008 ರಲ್ಲಿ ಇದೇ ದಿನ ಟೀನೇಜರ್ ಆಗಿ ನನ್ನ ದಿನ ಆರಂಭಿಸಿದ್ದೆ, ಇಂದು 2019 ರವರೆಗೆ 11 ವರ್ಷದ ಯಾತ್ರೆ ಮುಗಿಸಿದ್ದೇನೆ. ನನ್ನ ಮೇಲೆ ನೀವು ಇಷ್ಟೊಂದು ಪ್ರೀತಿ, ಹಾರೈಸುತ್ತೀರಿ ಎಂದು ಕಲ್ಪನೆ ಕೂಡ ಮಾಡಿರಲಿಲ್ಲ. ನಿಮಗೆಲ್ಲರಿಗೂ ಸದಾ ಚಿರಋಣಿ ಎಂದು ಬರೆದಿದ್ದಾರೆ. ಅಂತೆಯೇ ತಮ್ಮ ಮೊದಲ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದ ಫೋಟೋ ಮತ್ತು ಇತ್ತೀಗಿನ ಆ್ಯಂಟಿಗುವಾ ಹೊಟೆಲ್ ನಲ್ಲಿ ತೆಗೆದ ಚಿತ್ರವನ್ನು ಅಪ್ಲೋಡ್ ಮಾಡಿದ್ದಾರೆ.

ಭಾರತ ತಂಡದ ಸಾರಥ್ಯವಹಿಸಿರುವ ವಿರಾಟ್ ಕೊಹ್ಲಿ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾರೆ. ವಿಂಡೀಸ್ ವಿರುದ್ಧ ಟಿ20 ಮತ್ತು ಏಕದಿನ ಸರಣಿಯನ್ನು ಗೆದ್ದಿರುವ ಭಾರತ ತಂಡ ಇದೇ ಆಗಸ್ಟ್ 22ರಿಂದ ಆ್ಯಂಟಿಗುವಾದಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

2008ರ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಕಣಕ್ಕಿಳಿದಿದ್ದ ಕೊಹ್ಲಿ ತಮ್ಮ ಮೊದಲ ಪಂದ್ಯದಲ್ಲಿ 12 ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು. ವಿರಾಟ್‌ ಇದುವರೆಗೆ ಏಕದಿನ ಪಂದ್ಯದಲ್ಲಿ 11,520 ರನ್‌ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 6,613 ರನ್‌ ಮತ್ತು ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 2,369 ರನ್‌ ಗಳಿಸಿದ್ದಾರೆ. ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ ಎರಡಲ್ಲೂ ನಂ.1 ಸ್ಥಾನದಲ್ಲಿರುವ ಕೊಹ್ಲಿ ಇತ್ತೀಚೆಗೆ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ದಶಕದ ಅವಧಿಯಲ್ಲಿ 20,000 ರನ್‌ಗಳ ಗಡಿ ದಾಟಿದ ಮೊದಲ ಆಟಗಾರ ಎಂದೆನಿಸಿಕೊಂಡರು.

Comments are closed.