
ಟೀಂ ಇಂಡಿಯಾದ ಯಾರ್ಕರ್ ಮಾಂತ್ರಿಕ ಜಸ್ಪ್ರೀತ್ ಬುಮ್ರಾ ನಟಿ ಅನುಪಮಾ ಪರಮೇಶ್ವರನ್ ಜೊತೆ ಲವ್ನಲ್ಲಿ ಬಿದ್ದಿದ್ದಾರೆಂಬ ಸುದ್ದಿಯೊಂದು ಕೆಲ ದಿನಗಳ ಹಿಂದೆ ಭಾರೀ ವೈರಲ್ ಆಗಿತ್ತು. ಆ ರೀತಿ ಏನೂ ಇಲ್ಲ ಎಂದು ಸ್ವತಃ ಅನುಪಮಾ ಪರಮೇಶ್ವರನ್ ಸ್ಪಷ್ಟನೆ ನೀಡಿದ್ದರು. ಆದರೆ, ಮತ್ತೆ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ಜಸ್ಪ್ರೀತ್ ಹಾಕಿರುವ ಫೋಟೋ.
ಜಸ್ಪ್ರೀತ್ ನಿನ್ನೆ ಟ್ವಿಟ್ಟರ್ನಲ್ಲಿ ಫೋಟೋ ಒಂದನ್ನು ಹಾಕಿದ್ದರು. ಜಸ್ಪ್ರೀತ್ ಮಹಿಳೆಯೊಬ್ಬರ ಹೆಗಲ ಮೇಲೆ ಕೈ ಇಟ್ಟುಕೊಂಡು ಹೋಗುತ್ತಿರುವುದು ಫೋಟೋದಲ್ಲಿ ಕಂಡುಬರುತ್ತಿದೆ. ಅಲ್ಲದೆ, “ಎಷ್ಟೇ ಕಷ್ಟ ಬಂದರೂ ಈ ಭುಜ ಸದಾ ನನಗೆ ನೆರವಾಗಿತ್ತು,” ಎಂದು ಬರೆದುಕೊಂಡಿದ್ದರು. ಈ ಫೋಟೋ ನೋಡಿದ ಅನೇಕರು ಇದು ಅನುಪಮಾ ಪರಮೇಶ್ವರನ್ ಎಂದು ಬರೆದುಕೊಂಡಿದ್ದಾರೆ!
ನಿಜಕ್ಕೂ ಜಸ್ಪ್ರೀತ್ ಪಕ್ಕ ನಿಂತವರು ಯಾರು? ಅನುಪಮಾ ಅವರ? ಈ ಪ್ರಶ್ನೆಗೆ ನೆಟ್ಟಿಗರೇ ಉತ್ತರ ಕಂಡುಕೊಂಡಿದ್ದಾರೆ. ಈ ಫೋಟೋದಲ್ಲಿರುವವರು ಅನುಪಮಾ ಅಲ್ಲ. ಬದಲಿಗೆ ಬೂಮ್ರಾ ತಾಯಿ! ಹೌದು, ಬೂಮ್ರಾ ಈ ಮೊದಲು ತಾಯಿ ಜೊತೆ ಇದ್ದ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಹಾಗಾಗಿ ಈ ಫೋಟೋದಲ್ಲಿರುವವರೂ ಬೂಮ್ರಾ ತಾಯಿಯೇ ಹೊರತು ಅನುಪಮಾ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ಇದು ಅನುಪಮಾ ಫೋಟೋ ಎಂದು ಹೇಳಿರುವುದಕ್ಕೆ ಸಿಟ್ಟಾಗಿದ್ದಾರೆ.
ಇತ್ತೀಚೆಗೆ ಮಾಧ್ಯಮದ ಜೊತೆ ಮಾತನಾಡಿದ್ದ ಅನುಪಮಾ, “ಇದೆಲ್ಲವೂ ಕೇವಲ ಊಹಾಪೋಹ. ನಾನು ಬುಮ್ರಾ ಉತ್ತಮ ಸ್ನೇಹಿತರು ಎಂಬುದು ನಿಜ. ಇದರಿಂದಾಗಿ ಪ್ರೇಮಕಥೆಯೊಂದು ಹುಟ್ಟಿಕೊಂಡಿದೆ. ಇಂತಹ ವಿಷಯಗಳಿಂದ ದೂರವಿರಲು ನಾನು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದ್ದರು.
Comments are closed.