ಲಂಡನ್: ಕಳಪೆ ಪ್ರದರ್ಶನ ನೀಡುತ್ತಾ ವಿಶ್ವಕಪ್ ಟೂರ್ನಿಯಿಂದ ಬರಿಗೈಯಲ್ಲಿ ವಾಪಸ್ ಹೋಗಬೇಕಾದ ಪರಿಸ್ಥಿತಿ ಬಂದರೆ ಪಾಕ್ ಜನತೆಯ ಕೆಂಗಣ್ಣಿಗೆ ನಾನೊಬ್ಬನೆ ಗುರಿಯಾಗುವುದಿಲ್ಲ ಎಚ್ಚರಿಕೆಯಿಂದ ಆಟವಾಡಿ ಎಂದು ಸಹ ಆಟಗಾರರಿಗೆ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ವಾರ್ನಿಂಗ್ ಕೊಟ್ಟಿದ್ದಾರೆ.
ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲಿನ ಬಳಿಕ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ನಾಯಕತ್ವದ ನಿರ್ಧಾರಗಳು, ಅವರ ಆಕಳಿಕೆಯನ್ನು ಹಲವಾರು ಮಂದಿ ವ್ಯಂಗ್ಯವಾಡಿದ್ದರು. ಇದರಿಂದ ರೋಸಿ ಹೋಗಿರುವ ಸರ್ಫರಾಜ್ ತಮ್ಮ ತಂಡದ ಪ್ರದರ್ಶನ ಸುಧಾರಿಸಲು ಕಟುವಾದ ಎಚ್ಚರಿಕೆ ನೀಡಿದ್ದಾರೆ.
ಟೂರ್ನಿಯಿಂದ ಪಾಕಿಸ್ತಾನಕ್ಕೆ ಮರಳಿ ಹೋಗುವುದು ನಾನೊಬ್ಬನೆ ಅಲ್ಲ. ಇದನ್ನು ನೆನಪಿನಲ್ಲಿಟ್ಟುಕೊಂಡು ಆಟವಾಡಿ. ಕಳಪೆ ಪ್ರದರ್ಶನಕ್ಕೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಎಲ್ಲರೂ ಜವಾಬ್ದಾರರು ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ 5 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಮಾತ್ರ ಗೆದ್ದಿದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
Comments are closed.