ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಶಾರ್ದೂಲ್ ಠಾಕೂರ್ ರನ್ನು ರನೌಟ್ ಮಾಡುವ ಮೂಲಕ ಪಂದ್ಯವನ್ನು ಗೆಲ್ಲಿಸಿದ ಪಾರ್ಥಿವ್ ಪಟೇಲ್ ಅಭಿಮಾನಿಗಳ ದೃಷ್ಠಿಯಲ್ಲಿ ಹೀರೋ ಆಗಿದ್ದಾರೆ.
Posted by Vishwa Raj on Sunday, 21 April 2019
ಕೊನೆಯ ಓವರ್ ನಲ್ಲಿ ಚೆನ್ನೈಗೆ ಗೆಲ್ಲಲು 26 ರನ್ ಬೇಕಿತ್ತು. ಈ ವೇಳೆ ಎಂಎಸ್ ಧೋನಿ 4,6,6,2,6 ರನ್ ಬಾರಿಸಿದ್ದರು. ಇನ್ನು ಕೊನೆಯ ಎಸೆತದಲ್ಲಿ ಗೆಲ್ಲಲು ಚೆನ್ನೈಗೆ 2 ರನ್ ಬೇಕಿತ್ತು. ಈ ವೇಳೆ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದರು. ಚೆಂಡು ಕೀಪರ್ ಕೈ ಸೇರುತ್ತಿದ್ದಂತೆ 1 ರನ್ ಪಡೆದು ಪಂದ್ಯವನ್ನು ಡ್ರಾ ಮಾಡಲು ಧೋನಿ ಮುಂದಾದರು. ಆದರೆ ನಾನ್ ಸ್ಟ್ರೈಕ್ ನಲ್ಲಿದ್ದ ಶಾರ್ದೂಲ್ ಠಾಕೂರ್ ಕ್ರೀಸ್ ಗೆ ಬರುವ ಮುನ್ನವೇ ಪಾರ್ಥಿವ್ ರನೌಟ್ ಮಾಡಿದರು. ಇದರೊಂದಿಗೆ ಆರ್ಸಿಬಿ ತಂಡ 1 ರನ್ ನಿಂದ ರೋಚಕ ಗೆಲುವು ಪಡೆಯಿತು.
ಅಂತೂ ಪಾರ್ಥಿವ್ ಪಟೇಲ್ ಅವರ ಜಾಣ್ಮೆಯ ಆಟದಿಂದ ಆರ್ಸಿಬಿ ಪಂದ್ಯ ಗೆದ್ದು ಬೀಗಿತ್ತು. ಪಾರ್ಥಿವ್ ಪಟೇಲ್ ರನೌಟ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ತಂಡ ನಿಗದಿತ ಓವರ್ ನಲ್ಲಿ 161 ರನ್ ಪೇರಿಸಿತ್ತು. 162 ರನ್ ಗುರಿ ಬೆನ್ನಟ್ಟಿದ್ದ ಚೆನ್ನೈ ತಂಡವನ್ನು 160 ರನ್ ಗಳಿಗೆ ಕಟ್ಟಿ ಹಾಕುವ ಮೂಲಕ 1 ರನ್ ನಿಂದ ಗೆಲುವು ಸಾಧಿಸಿತು.