ಕ್ರೀಡೆ

2 ವರ್ಷದ ನಂತರ ಲೈನ್ ನೋ-ಬಾಲ್ ಎಸೆದ ಇಂಗ್ಲೆಂಡ್ ಬೌಲರ್ ಬೆನ್ ಸ್ಟೋಕ್ಸ್

Pinterest LinkedIn Tumblr


ಓವಲ್: ಇಂಗ್ಲೆಂಡ್ ತಂಡದ ಬೌಲರ್ ಬೆನ್ ಸ್ಟೋಕ್ಸ್, ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಲೈನ್ ನೋ ಬಾಲ್ ಎಸೆದಿದ್ದು, ಈ ಮೂಲಕ ಬೇಡವಾದ ದಾಖಲೆಯನ್ನು ಬರೆದಿದ್ದಾರೆ.

ಏಕದಿನ ಕ್ರಿಕೆಟ್ ಮಾದರಿಯಲ್ಲಿ 2 ವರ್ಷಗಳ ಬಳಿಕ ಇಂಗ್ಲೆಂಡ್ ಪರ ಸ್ಟೋಕ್ಸ್ ಲೈನ್ ನೋ ಬಾಲ್ ಎಸೆದಿದ್ದಾರೆ. ಪಂದ್ಯದ 48ನೇ ಓವರ್ ಬೌಲ್ ಮಾಡಿದ ಸ್ಟೋಕ್ಸ್ ನೋ ಬಾಲ್ ಎಸೆದರು. ಈ ವೇಳೆ ಸ್ಟ್ರೈಕ್ ನಲ್ಲಿದ್ದ ಹೆಟ್ಮಾಯರ್ ನೋ ಬಾಲ್ ಎಸೆತದಲ್ಲಿ ಒಂದು ರನ್ ಮಾತ್ರ ಪಡೆದರು. ಈ ಹಿಂದೆ 2017 ಜನವರಿಯಲ್ಲಿ ಇಂಗ್ಲೆಂಡ್ ತಂಡದ ಲಿಯಾಮ್ ಪ್ಲಂಕೆಟ್ ಲೈನ್ ನೋ ಬಾಲ್ ಎಸೆದಿದ್ದರು.

ಕಳೆದ 2 ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ ಬೌಲರ್ ಗಳು 11 ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ್ದಾರೆ. ಆದರೆ ಈ ಅವಧಿಯಲ್ಲಿ ಯಾವುದೇ ಲೈನ್ ನೋ ಬಾಲ್ ಆಗಿರಲಿಲ್ಲ. ನೋ ಬಾಲ್ ಬಳಿಕ ಫ್ರೀ ಹಿಟ್ ಅವಕಾಶ ಪಡೆದ ನರ್ಸ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾಗಿದ್ದು, 1 ರನ್ ಮಾತ್ರ ಗಳಿಸಲು ಯಶಸ್ವಿಯಾದರು. ಇಂಗ್ಲೆಂಡ್ ತನ್ನ ಇನ್ನಿಂಗ್ಸ್ ನಲ್ಲಿ 13 ರನ್ ಹೆಚ್ಚುವರಿಯಾಗಿ ನೀಡಿತ್ತು.

ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ವಿಂಡೀಸ್ 289 ರನ್ ಗಳಿಸಿದರೆ. ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 263 ರನ್ ಗಳಿಗೆ ಅಲೌಟ್ ಆಯ್ತು. ಪರಿಣಾಮ ವಿಂಡೀಸ್ 26 ರನ್ ಗಳ ಅಂತರ ಜಯ ಪಡೆದು 5 ಪಂದ್ಯಗಳ ಟೂರ್ನಿಯಲ್ಲಿ 1-1ರ ಅಂತರದಲ್ಲಿ ಸಮಬಲ ಸಾಧಿಸಿತು.

Comments are closed.