ಕ್ರೀಡೆ

ಫೆ.15ರಂದು ಅಜ್ಮಾನಿನಲ್ಲಿ ನಡೆಯಲಿದೆ ಅದ್ದೂರಿಯ ‘ಬಿಸಿಎಫ್ ಕ್ರೀಡೋತ್ಸವ 2019’

Pinterest LinkedIn Tumblr

ಅಜ್ಮಾನ್: ದುಬೈಯ ಪ್ರತಿಷ್ಠಿತ ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್ ) ಪ್ರತೀ ವರ್ಷ ಸಾವಿರಾರು ಅನಿವಾಸಿ ಕನ್ನಡಿಗರನ್ನು ಒಟ್ಟು ಗೂಡಿಸಿ ಅದ್ದೂರಿಯ ಬಿಸಿಫ್ ಕ್ರೀಡಾ ಕೂಟವನ್ನು ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ‘ಬಿಸಿಎಫ್ ಕ್ರೀಡೋತ್ಸವ 2019’ ಫೆ.15ರಂದು ಅಜ್ಮಾನಿನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಕ್ರೀಡಾಂಗಣದಲ್ಲಿ ಏರ್ಪಡಿಸುವುದಾಗಿ ಬಿಸಿಎಫ್  ಕ್ರೀಡಾ ಕೂಟ ಸಮಿತಿ 2019ರ ಚಯರ್ಮ್ಯಾನ್ ಅಬ್ದುಲ್ ರಹಿಮಾನ್ ಸಜಿಪ  ತಿಳಿಸಿದ್ದಾರೆ.

ಈ ಕ್ರೀಡಾ ಕೂಟದ ಅಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷರಾದ ಡಾ. ಬಿಕೆ ಯೂಸುಫ್ ವಹಿಸಲಿದ್ದು,  ಬಿಸಿಎಫ್ ಸ್ಥಾಪಕ ಪೋಷಕರಾದ ಡಾ. ತುಂಬೆ ಮೊಹಿಯುದ್ದೀನ್ ಹಾಗೂ ಇತರ ಹಲವಾರು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಕ್ರೀಡೆಗಳು ಮತ್ತು ಕರಾವಳಿ ಕರ್ನಾಟಕದ ಹಲವಾರು ವಿಶೇಷ ಕ್ರೀಡೆಗಳು ನಡೆಯಲಿವೆ.

ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಕ್ರಿಕೆಟ್, ವಾಲಿಬಾಲ್ , ಕಬಡ್ಡಿ, ತ್ರೋ ಬಾಲ್, ಬ್ಯಾಡ್ ಮಿಂಟನ್, ಬಿಲಿಯರ್ಡ್ಸ್, ರಿಲೇ, ಹಗ್ಗ ಜಗ್ಗಾಟ, ಮೊದಲಾದ ಕ್ರೀಡೆಗಳನ್ನು ನಡೆಸಲಾಗುವುದು. ಮಹಿಳೆಯರಿಗೆ ವಿಶೇಷವಾಗಿ ಪಾಕ ಸ್ಪರ್ಧೆ, ಮೆಹಂದಿ ಡಿಸೈನ್  ಮೊದಲಾದ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ  ಮಧ್ಯಾಹ್ನದ ಭೋಜನದ ಜೊತೆಗೆ ಉಪಹಾರ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಅಬ್ದುಲ್ ರಹ್ಮಾನ್ ಸಜಿಪ 050-7983573, ಅಫೀಖ್ ಹುಸೈನ್ 050-5883943, ರಫೀಖ್ ಮುಲ್ಕಿ 050-5156284, ನವಾಝ್ ಕೊಟೆಕಾರ್ 050-8417475, ಮಮ್ತಾಝ್ 056-2721152 ಅವರನ್ನು ಸಂಪರ್ಕಿಸಲು ಅಬ್ದುಲ್ ರಹಿಮಾನ್ ಸಜಿಪ ಮತ್ತು ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.