ಕ್ರೀಡೆ

ಮ್ಯಾಚ್ ಫಿನಿಶ್ ಮಾಡಲು ನೀವೆನು ಎಂ ಎಸ್ ಧೋನಿಯೇ?’

Pinterest LinkedIn Tumblr


ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ-20 ಸರಣಿ ಮುಕ್ತಾಯಗೊಂಡು ಎರಡು ದಿನಗಳು ಕಳಿದಿವೆ. ಇಷ್ಟಾದರು ಬ್ಯಾಟ್ಸ್​ಮನ್​ ದಿನೇಶ್ ಕಾರ್ತಿಕ್​​​​ ಮೇಲಿನ ಸಿಟ್ಟು ಅಭಿಮಾನಿಗಳಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿಲ್ಲ. ಈಗಲು ಕಾರ್ತಿಕ್ ಮೇಲೆ ಅನೇಕ ಕಮೆಂಟ್​​ಗಳು ಬರುತ್ತಲೆ ಇದೆ.

ಏನಿದು ಘಟನೆ:

ಭಾರತ-ನ್ಯೂಜಿಲೆಂಡ್ ನಡುವಣ ಮೂರನೇ ಟಿ-20 ಪಂದ್ಯದಲ್ಲಿ ಭಾರತ 4 ರನ್​ಗಳ ಸೋಲುಕಂಡಿತು. ಈ ಮೂಲಕ ಕಿವೀಸ್ ನೆಲದಲ್ಲಿ ಐತಿಹಾಸಿಕ ಗೆಲುವನ್ನು ಸಂಭ್ರಮಿಸುವ ಟೀಂ ಇಂಡಿಯಾ ಆಟಗಾರರ ಕನಸು ಕನಸಾಗಿಯೆ ಉಳಿಯುವಂತಾಯಿತು. ಈ ಮಧ್ಯೆ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ದಿನೇಶ್ ಕಾರ್ತಿಕ್ ಎಂದು ಹೇಳಲಾಗುತ್ತಿದೆ. ಕೊನೆಯ ಓವರ್​ನ ಮೂರನೇ ಎಸೆತದಲ್ಲಿ 1 ರನ್ ಕಲೆಹಾಕುವ ಅವಕಾಶವಿದ್ದರು ಕ್ರುನಾಲ್ ಪಾಂಡ್ಯಗೆ ಬ್ಯಾಟಿಂಗ್ ಕೊಡದೆ ತಾವೇ ಮುಂದಿನ ಬಾಲ್ ಎದುರಿಸಲು ಕಾರ್ತಿಕ್ ಸಿದ್ಧರಾದರು. ಆದರೆ, ಕಾರ್ತಿಕ್​​ಗೆ ಪಂದ್ಯ ಗೆಲ್ಲಿಸಿ ಕೊಡಲು ಸಾಧ್ಯವಾಗಿಲ್ಲ.

ಹೀಗಾಗಿ ಕಾರ್ತಿಕ್​​ ವಿರುದ್ಧ ಟ್ವಿಟ್ಟರ್​​ನಲ್ಲಿ ಅಭಿಮಾನಿಗಳು ಆಕ್ರೋಶಭರಿತವಾಗಿ ಕಮೆಂಟ್ ಮಾಡಿದ್ದಾರೆ. ಅದರಲ್ಲು ಕೊನೆಯ ಬಾಲ್​ಗೆ ಮ್ಯಾಚ್ ಫಿನಿಶ್ ಮಾಡಲು ನೀವೇನು ಎಂ ಎಸ್ ಧೋನಿ ಎಂದುಕೊಂಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.. ಅಲ್ಲದೆ ಟೀಂ ಇಂಡಿಯಾದಿಂದ ಇಂತಹ ಆಟಗಾರನನ್ನು ಹೊರಗಿಡಿ ಸೇರಿದಂತೆ ಅನೇಕ ನೆಗಟಿವ್ ಕಮೆಂಟ್​ಗಳು ಬಂದಿದ್ದವು.

ಆದರೆ, ನಾವಿಲ್ಲ ಗಮನಿಸಬೇಕಾದ ಅಂಶವೆಂದರೆ ದಿನೇಶ್ ಕಾರ್ತಿಕ್ ಪಂದ್ಯವನ್ನು ಫಿನಿಶ್ ಮಾಡುವಂತಹ ಹಂತದಲ್ಲಿ ಬೆಳೆಯುತ್ತಿದ್ದಾರಷ್ಟೆ. ಅವರಿನ್ನು ಇದರಲ್ಲಿ ಧೋನಿಯಿಂತೆ ಸಂಪೂರ್ಣವಾಗಿ ಯಶಸ್ಸು ಕಂಡಿಲ್ಲ. ಹೀಗಾಗಿ ಕಾರ್ತಿಕ್​​ರನ್ನು ಧೊನಿಗೆ ಹೋಲಿಕೆ ಮಾಡುವುದು ಸರಿಯಲ್ಲ.

ಟೀಂ ಇಂಡಿಯಾ ಸೋಲಿಗೆ ದಿನೇಶ್ ಕಾರ್ತಿಕ್​​ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಉಳಿದ ಬ್ಯಾಟ್ಸ್​ಮನ್​​​ಗಳ ಪಾಲುಕೂಡ ಇದರಲ್ಲಿದೆ ಎಂಬುದನ್ನು ಮರೆಯುವಂತಿಲ್ಲ. ಮತ್ತೊಂದು ನಿಜಾಂಶವೆಂದರೆ ಈ ಪಂದ್ಯದಲ್ಲಿ ಗರಿಷ್ಠ ಸ್ಟ್ರೈಕ್​ರೇಟ್ ಹೊಂದಿದ್ದ ಆಟಗಾರರೆಂದರೆ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್​​.

ಗ್ರೇಟ್ ಫಿನಿಶರ್ ಎಂದು ಒಬ್ಬ ಆಟಗಾರನನ್ನು ಆಯ್ಕೆ ಮಾಡುವುದು ಸುಲಭದ ವಿಚಾರವಲ್ಲ. ಅನೇಕ ಪಂದ್ಯಗಳಲ್ಲಿ, ಎಂತಹದೇ ಸಂದರ್ಭದಲ್ಲಿ ಆತ ತಂಡಕ್ಕೆ ಆಸರೆಯಾಗಿ ನಿಲ್ಲಬೇಕು. ಎಂ ಎಸ್ ಧೋನಿ ಕೂಡ ಕತ್ತಲು ಬೆಳಕು ಕಳೆಯುವಷ್ಟರಲ್ಲಿ ವಿಶ್ವದ ಶ್ರೇಷ್ಠ ಫಿನಿಶರ್ ಎನಿಸಿಕೊಂಡಿಲ್ಲ. ಅದಕ್ಕೆ ಸಾಕಷ್ಟು ವರ್ಷಗಳ ಶ್ರಮ ಹಾಗೂ ಪ್ರತಿ ಪಂದ್ಯಗಳಲ್ಲಿ ಯೋಜನೆಗಳನ್ನು ಹಾಕಿಕೊಂಡು ಈ ಬಿರುದು ಪಡೆದುಕೊಂಡಿದ್ದಾರೆ. ಹೀಗಿರುವಾಗ ಕಾರ್ತಿಕ್​​ರ ಬಗ್ಗೆ ಈ ರೀತಿ ಕಮೆಂಟ್ ಮಾಡುವುದು ಎಷ್ಟುಸರಿ.

ಕಾರ್ತಿಕ್​​ ಈ ಪಂದ್ಯದಲ್ಲಿ ಮಾಡಿದ ತಪ್ಪನ್ನು ಸದ್ಯ ಅರಿತುಕೊಂಡಿದ್ದಾರೆ. ಮುಂದೆ ಇಂತಹ ತಪ್ಪನ್ನು ಮಾಡಬಾರದು ಎಂಬುದು ಅವರಿಗೀಗ ಮನವರಿಕೆಯಾಗಿದೆ. ಮುಂದಿನ ಪಂದ್ಯಗಳಲ್ಲಿ ಯೋಚಿಸಿ ಸಿದ್ದರಾಗುತ್ತಾರೆ. ಆದರೆ, ಧೋನಿ ಹೆಸರನ್ನು ಹಿಡಿದು ದೂರುವುದು ಸರಿಯಲ್ಲ. ಈ ಹಿಂದೆ ಬರ್ಮಿಂಗ್​ಹ್ಯಾಮ್​​ನಲ್ಲಿ ಇಂಗ್ಲೆಂಡ್​ ವಿರುದ್ಧದ ಟಿ-20 ಪಂದ್ಯದದ ವೇಳೆ ಧೋನಿ ಕೂಡ ಕೊನೆ ಕ್ಷಣದಲ್ಲಿ ಸಿಂಗಲ್ ರನ್ ಕಲೆಹಾಕದೆ ತಾವೆ ಸ್ಟ್ರೈಕ್ ಪಡೆದುಕೊಂಡಿದ್ದರು. ಇದರಲ್ಲಿ ಭಾರತ ಸೋಲಬೇಕಾಯುತು ಎಂಬ ವಿಷಯವನ್ನು ಮರೆಯುವಂತಿಲ್ಲ.

ಟ್ವಿಟ್ಟರ್​​ನಲ್ಲಿ ಕಾರ್ತಿಕ್​​ ವಿರುದ್ಧ ಆಕ್ರೋಶ:

Why didn’t Karthik take that single? Does he think he is Dhoni?

— Ashish Magotra (@clutchplay) February 10, 2019

Dinesh Karthik thinks he was Dhoni. Okay absolutely fine. But he thought Krunal Pandya is Ashwin????? #NZvIND

— Sameer Allana (@HitmanCricket) February 10, 2019

What was DK’s point in refusing the single? It’s not like he was batting with a tailender who couldn’t have hit a 6. Krunal had just as much chance of clearing the boundary as DK. This “misjudgement” might perhaps cost him a potential World Cup spot. #NZvIND

— महादादा (@mahadada) February 10, 2019

Ellarum @msdhoni aga mudiyathu

— Arun (@arunmano1) February 12, 2019

Comments are closed.