ಕ್ರೀಡೆ

ಐತಿಹಾಸಿಕ ಅತ್ಯಪರೂಪದ ದಾಖಲೆ ಬರೆದ ಆಫ್ರಿಕನ್ ಕ್ರಿಕೆಟರ್ಸ್!

Pinterest LinkedIn Tumblr


ಕೇಪ್ ಟೌನ್: ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಏಕದಿನ ಪಂದ್ಯದಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ಮೊದಲು ಎಂಬಂತಹ ಅತ್ಯಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ.
ಹೌದು.. ಪಾಕಿಸ್ತಾನ ವಿರುದ್ಧ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಇಬ್ಬರು ಬ್ಯಾಟ್ಸಮನ್ ಗಳ ತಲಾ ಅಜೇಯ ಅರ್ಧಶತಕದೊಂದಿಗೆ ಇನ್ನಿಂಗ್ಸ್ ಮುಕ್ತಾಯಗೊಳಿಸುವ ಮೂಲಕ ನೂತನ ದಾಖಲೆ ನಿರ್ಮಾಣ ಮಾಡಿದ್ದಾರೆ. ಕೇಪ್ ಟೌನ್ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಫಖರ್ ಜಮಾನ್ (70 ರನ್)ಮತ್ತು ಇಮಾದ್ ವಸೀಂ (ಅಜೇಯ 47 ರನ್) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 240ರನ್ ಪೇರಿಸಿ ಆಫ್ರಿಕಾಗೆ ಗೆಲ್ಲಲು 241 ರನ್ ಗಳ ಗುರಿ ನೀಡಿತು.

ಈ ಗುರಿಯನ್ನು ಬೆನ್ನು ಹತ್ತಿದೆ ಆಫ್ರಿಕಾ ತಂಡ 40 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 241 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ಈ ಇನ್ನಿಂಗ್ಸ್ ನಲ್ಲಿ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 83 ರನ್ ಗಳಿಸಿದರೆ, ನಾಯಕ ಫಾಫ್ ಡುಪ್ಲೆಸಿಸ್ (ಅಜೇಯ 50 ರನ್) ಮತ್ತು ರಾಸ್ಸೀ ವಾನ್ ಡೆರ್ ಡಸೆನ್ (ಅಜೇಯ 50 ರನ್) ದಾಖಲೆಯ ಅರ್ಧಶತಕದೊಂದಿಗೆ ಗೆಲುವಿನ ನಗೆ ಬೀರಿತು. ಇನ್ನಿಂಗ್ಸ್ ಅಂತ್ಯದ ಹೊತ್ತಿಗೆ ಕ್ರೀಸ್ ನಲ್ಲಿದ್ದ ಇಬ್ಬರೂ ಆಟಗಾರರೂ ಒಂದೂ ರನ್ ಹೆಚ್ಚು ಕಡಿಮೆ ಇಲ್ಲದೇ ತಲಾ ಅಜೇಯ 50 ರನ್ ಗಳಿಗೆ ಇನ್ನಿಂಗ್ಸ್ ಮುಕ್ತಾಯ ಮಾಡಿರುವುದು ಇದೇ ಮೊದಲು.
ಕ್ರಿಕೆಟ್ ಇತಿಹಾಸದಲ್ಲೇ ಇಂತಹ ಘಟನೆ ಮೊದಲನೆಯದಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಇನ್ನಿಂಗ್ಸ್ ನಲ್ಲಿ 72 ಎಸೆತವನ್ನು ಎದುರಿಸಿದ್ದ ಫಾಫ್ ಡುಪ್ಲೆಸ್ಸ್ 69.44 ಸರಾಸರಿಯಲ್ಲಿ 3 ಬೌಂಡರಿ ಸಹಿತ 50ರನ್ ಕಲೆಹಾಕಿದರು. ಅಂತೆಯೇ ರಾಸ್ಸೀ ವಾನ್ ಡೆರ್ ಡಸೆನ್ 61 ಎಸೆತಗಳನ್ನು ಎದುರಿಸಿ 81.77 ಸರಾಸರಿಯಲ್ಲಿ 3 ಸಿಕ್ಸರ್ ಗಳ ಸಹಿತ ಅಜೇಯ 50 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದಿತ್ತರು.

Comments are closed.