ಕ್ರೀಡೆ

ಟೀಂ ಇಂಡಿಯಾ ಸೋಲಿಗೆ ವಿರಾಟ್ ಕೊಹ್ಲಿ ಮಾಡಿದ ತಪ್ಪುಗಳು!

Pinterest LinkedIn Tumblr


ಸಿಡ್ನಿ: ಆಸ್ಟ್ರೇಲಿಯಾ ನೆಲದಲ್ಲಿ 71 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದ ಟೀಂ ಇಂಡಿಯಾ ಇದೀಗ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಮುಖಭಂಗಕ್ಕೆ ಗುರಿಯಾಗಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 34 ರನ್ ಗಳಿಂದ ಸೋಲು ಕಂಡಿತ್ತು. 2019ರ ವಿಶ್ವಕಪ್ ಪಂದ್ಯಾವಳಿಯಲ್ಲಿ ನಮ್ಮದೇ ಬಲಿಷ್ಠ ತಂಡ ಎಂದು ಬೀಗುತ್ತಿದ್ದ ಕೊಹ್ಲಿಗೆ ನಿರಾಸೆ ಎದುರಾಗಿದೆ.
ಟೀಂ ಇಂಡಿಯಾ ಸೋಲಿಗೆ ಕಾರಣಗಳಿವು?
*ಅತಿಯಾದ ಆತ್ಮವಿಶ್ವಾಸ
ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಟೆಸ್ಟ್ ಸರಣಿಯ ಗೆಲುವಿನಿಂದ ವಿರಾಟ್ ಕೊಹ್ಲಿ ಅತಿಯಾದ ಆತ್ಮವಿಶ್ವಾಸ ಹೊಂದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗೆಲ್ಲೋದು ನಾವೇ ಎಂದು ಭಾವಿಸಿದ್ದು ಸೋಲಿಗೆ ಕಾರಣವಾಗಿದೆ.
* ಕೇದರ್ ಜಾದವ್ ಬದಲಿಗೆ ರವೀಂದ್ರ ಜಡೇಜಾಗೆ ಚಾನ್ಸ್
ಇನ್ನು ವಿರಾಟ್ ಕೊಹ್ಲಿ ಏಕದಿನ ಪಂದ್ಯದಲ್ಲಿ ಕೇದರ್ ಜಾದವ್ ಗೆ ಬದಲಾಗಿ ರವೀಂದ್ರ ಜಡೇಜಾಗೆ ಚಾನ್ಸ್ ನೀಡಿದ್ದು ಮತ್ತೊಂದು ಎಡವಟ್ಟು. ಆಲ್ರೌಂಡರ್ ಆಗಿದ್ದ ಜಾದವ್ ಒತ್ತಡ ಪರಿಸ್ಥಿತಿಯಲ್ಲಿ ತಂಡಕ್ಕೆ ಆಸರೆಯಾಗುವ ಎದೆಗಾರಿಕೆ ಇದೆ. ಹೌದು ಸೋಲಿನ ಸುಳಿಗೆ ಸಿಲುಕಿದ್ದ ಕೆಲವೊಂದು ಪಂದ್ಯಗಳಲ್ಲಿ ಜಾದವ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಕೊಹ್ಲಿ ಜಾದವ್ ಬದಲಿಗೆ ಜಡೇಜಾಗೆ ಚಾನ್ಸ್ ನೀಡಿದ್ದು ತಪ್ಪಾಯಿತು. ಇನ್ನು ಜಡೇಜಾ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.
* 4ನೇ ಆಟಗಾರನಾಗಿ ಧೋನಿ ಕಣಕ್ಕಿಳಿಯದಿರುವುದು
ಮಹೇಂದ್ರ ಸಿಂಗ್ ಧೋನಿ ನಾಲ್ಕನೇ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದಿದ್ದರೆ ಉತ್ತಮ ಅವಕಾಶ ಇರುತ್ತಿತ್ತು. ಹೌದು ಹಾಗಂತ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧೋನಿ ನಾಲ್ಕನೇ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದ್ದರೆ ಉತ್ತಮವಾಗಿ ಆಡುತ್ತಿದ್ದರು. ಅವರ ಬದಲಿಗೆ ಅಂಬಟ್ಟಿ ರಾಯುಡು ಆ ಜಾಗದಲ್ಲಿ ಬ್ಯಾಟ್ ಬೀಸಿದ್ದು ತಂಡಕ್ಕೆ ದೊಡ್ಡ ಹೊಡೆತವಾಗಿದೆ.
* ಜಸ್ ಪ್ರೀತ್ ಬುಮ್ರಾ ಅನುಪಸ್ಥಿತಿ
ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ತಂಡವನ್ನು ಕಾಡಿತ್ತು. ಹೌದು ಕೊನೆಯ ಹತ್ತು ಓವರ್ ಗಳಲ್ಲಿ ಎದುರಾಳಿ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕಲು ಬುಮ್ರಾರಂತ ಮತ್ತೊಬ್ಬ ಬೌಲರ್ ತಂಡದಲ್ಲಿಲ್ಲ. ಪಂದ್ಯದ ಕೊನೆಯ ಹತ್ತು ಓವರ್ ಗಳಲ್ಲಿ ಆಸ್ಟ್ರೇಲಿಯಾ 93 ರನ್ ಗಳಿಸಿದ್ದು ತಂಡಕ್ಕೆ ಬಾರಿ ಹೊಡೆತ ನೀಡಿತ್ತು.

Comments are closed.