ಕ್ರೀಡೆ

ನಾನು ಇಂಜಿನಿಯರಿಂಗ್ ಓದಕ್ಕೆ ಅಮ್ಮನಿಗೆ ಈಗ ಕೂಡ ಕೋಪವಿದೆ: ಕೆಎಲ್ ರಾಹುಲ್

Pinterest LinkedIn Tumblr


ಮುಂಬೈ: ಉತ್ತಮ ಪ್ರದರ್ಶನ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯ ಮನಗೆದ್ದು ರಾಷ್ಟ್ರಿಯ ತಂಡದಲ್ಲಿ ಸ್ಥಾನ ಪಡೆದಿದ್ದ ಕೆಎಲ್ ರಾಹುಲ್ ಸತತ ವೈಫಲ್ಯಗಳ ನಡುವೆಯೂ ತಂಡದಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಆದರೆ ಕೆಲ್ ರಾಹುಲ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ವೇಳೆ ಅವರ ಪೋಷಕರು ಸಂತೋಷಗೊಂಡಿರಲಿಲ್ಲ ಎಂದು ಸ್ವತಃ ರಾಹುಲ್ ಹೇಳಿದ್ದಾರೆ.

ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನ ಕಾರ್ಯಕ್ರಮದವೊಂದರಲ್ಲಿ ಭಾಗವಹಿಸಿದ್ದ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿ ಜೀವನದ ಆರಂಭಿಕ ಕ್ಷಣಗಳನ್ನು ಬಿಚ್ಚಿಟ್ಟಿದ್ದರು. ಈ ವೇಳೆ ನಾನು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿದ್ದರು ಪೋಷಕರು ಸಂತಸದಿಂದ ಇರಲಿಲ್ಲ. ನನ್ನ ಪೋಷಕರಿಗೆ ನಾನು ಇಂಜಿನಿಯರ್ ಆಗುವ ಆಸೆ ಇತ್ತು ಎಂದು ತಿಳಿಸಿದ್ದಾರೆ.

ಅಂದಹಾಗೇ ಕೆಎಲ್ ರಾಹುಲ್ ಪೋಷಕರಿಬ್ಬರು ಪ್ರಾಧ್ಯಾಪಕರಾಗಿದ್ದು, ಸಹೋದರಿ ಇಂಜಿನಿಯರ್ ಆಗಿದ್ದಾರೆ. ಆದ್ದರಿಂದ ಅವರಂತೆ ನನ್ನನು ಇಂಜಿನಿಯರ್ ಮಾಡಲು ಅವರಿಗೆ ಆಸೆ ಇತ್ತು. ಅಲ್ಲದೇ ನನಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಸಿಕ್ಕಾಗ ಅವರು ತುಂಬಾ ಸಂತಸಗೊಂಡಿದ್ದರು ಎಂಬುವುದನ್ನು ರಿವೀಲ್ ಮಾಡಿದ್ದಾರೆ.

ರಾಹುಲ್ ತಮ್ಮ ಪೋಷಕರ ಆಸೆಯ ವಿರುದ್ಧವಾಗಿ ನಿರ್ಣಯ ಕೈಗೊಂಡಿದ್ದರು. ದೇಶದ ಪರ ಪ್ರತಿನಿಧಿಸುವ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದು, ಅವರ ಬೆಂಬಲದಿಂದ ನಾನು ಇಲ್ಲಿಯವರೆಗೂ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

Comments are closed.