ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟಿನಲ್ಲಿ 16 ನೊ ಬಾಲ್ ಹಾಕಿದ ‘ನೋ ಬಾಲ್‍ಗಳ ಸರದಾರ’ ವೇಗಿ ಇಶಾಂತ್ ಶರ್ಮಾ ! ವೀಡಿಯೊ ವೈರಲ್

Pinterest LinkedIn Tumblr

ಅಡಿಲೇಡ್: ಅಡಿಲೇಡ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಐತಿಹಾಸಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿನ ಕೆಲ ಘಟನೆಗಳು ಆಸ್ಟ್ರೇಲಿಯನ್ನರ ಕೆಂಗಣ್ಣಿಗೆ ಗುರಿಯಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಸರಿಸುಮಾರು 16 ನೊ ಬಾಲ್ ಗಳನ್ನು ಹಾಕಿದ್ದು ಆದರೆ ಈ ನೋ ಬಾಲ್ ಗಳು ಅಂಪೈರ್ ಗಳ ಗಮನಕ್ಕೆ ಬಾರದೆ ಇರುವುದು ಶೋಚನೀಯ.

ಇಶಾಂತ್ ಶರ್ಮಾ ಎರಡು ಓವರ್ ಗಳಲ್ಲಿ ಆರು ಎಸೆತಗಳಲ್ಲಿ ನಾಲ್ಕು ಎಸೆತಗಳನ್ನು ನೋಬಾಲ್ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಶಾಂತ್ ಶರ್ಮಾ ನೋಬಾಲ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಅಂಪೈರ್ ಗಳ ವಿರುದ್ಧ ಹರಿಹಾಯ್ದಿದ್ದರು. ಇದೀಗ ಆಸ್ಟ್ರೇಲಿಯಾದ ಬೌಲರ್ ಗಳಾದ ಡೇಮಿಯನ್ ಫ್ಲೇಮಿಂಗ್ ಹಾಗೂ ಬ್ರಾಡ್ ಹಾಡ್ಜ್ ಸಹ ಅಂಪೈರ್ ಗಳ ವರ್ತನೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಅಡಿಲೇಡ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 31 ರನ್ ಗಳಿಂದ ಭರ್ಜರಿ ಜಯ ಗಳಿಸಿತ್ತು.

Comments are closed.