ಸಿಡ್ನಿ: ಕ್ರಿಕೆಟಿಗ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಆರ್ಭಟವನ್ನು ಕಟ್ಟಿಹಾಕಲು ಆಸ್ಟ್ರೇಲಿಯಾ ತಂಡ ನಿಷೇಧಿತ ಆಸಿಸ್ ಆಟಗಾರರ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಮೊರೆ ಹೋಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯ ಆಟವನ್ನು ನೋಡಿ ಆಸೀಸ್ ಆಟಗಾರರು ಕಂಗಾಲಾಗಿ ಹೋಗಿದ್ದಾರೆ. ಅಲ್ಲದೇ ಮುಂಬರುವ ಟೆಸ್ಟ್ ಸರಣಿಯಲ್ಲೂ ಕೊಹ್ಲಿ ಇದೇ ರೀತಿ ತನ್ನ ನಾಗಾಲೋಟವನ್ನು ಮುಂದುವರಿಸಿದರೆ ಸರಣಿ ಸೋಲನ್ನು ಅನುಭವಿಸುವುದು ನಿಜವೆಂದು ಭಾವಿಸಲಾಗಿದೆ.
ಹೀಗಾಗಿ ಖುದ್ದು ಆಸೀಸ್ ತಂಡ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಕ್ಕೊಳಗಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಆಟಗಾರರ ಮೊರೆ ಹೋಗಿದೆ. ಅಲ್ಲದೇ ಇಬ್ಬರೂ ಆಟಗಾರರು ಕೊಹ್ಲಿಯನ್ನು ಕಟ್ಟಿಹಾಕುವ ಕುರಿತು ಕೆಲ ಮಾಹಿತಿಗಳನ್ನು ಆಸೀಸ್ ಆಟಗಾರರೊಂದಿಗೆ ಹಂಚಿಕೊಂಡಿದ್ದಾರೆಂದು ಹೇಳಲಾಗಿದೆ.
ಇದಲ್ಲದೇ ಸ್ಮಿತ್ ಹಾಗೂ ವಾರ್ನರ್ ಆಸ್ಟ್ರೇಲಿಯಾ ತಂಡದ ಜೊತೆಗೆ ನೆಟ್ ಪ್ರಾಕ್ಟೀಸ್ ಕೂಡ ನಡೆಸುತ್ತಿದ್ದಾರೆ. ಇದರ ಜೊತೆ ಬೌಲಿಂಗ್ ಕೋಚ್ ಹಾಗೂ ಬೌಲರ್ ಗಳು ತಮ್ಮ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.
ಡಿಸೆಂಬರ್ 6 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯ ಅಡಿಲೇಡ್ ನಲ್ಲಿ ನಡೆಯಲಿದೆ.
Comments are closed.