ಕ್ರಿಕೆಟ್ ಪಂದ್ಯದ ವೇಳೆ ನಡೆದ ವಾಗ್ವಾದ ಏಳು ಜನರ ಸಾವಿಗೆ ಕಾರಣವಾದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಂದ್ಯದ ನಡೆಯುತ್ತಿದ್ದ ವೇಳೆ ಮಕ್ಕಳ ಮಧ್ಯೆ ಉಂಟಾದ ಜಗಳ ದುರಂತ ಅಂತ್ಯ ಕಂಡಿದೆ.
ಕ್ರಿಕೆಟ್ ಆಡುವಾಗ ತಲೆದೂರಿದ ಭಿನ್ನಾಭಿಪ್ರಾಯದಿಂದ ಎರಡು ತಂಡಗಳ ಬೆಂಬಲಿಗರು ಪರಸ್ಪರ ಮಾರಮಾರಿಗೆ ಇಳಿದಿದ್ದರು. ಈ ಸಣ್ಣ ಜಗಳ ಮತ್ತೊಂದು ಸ್ವರೂಪಕ್ಕೆ ತಿರುಗಿ, ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿಯು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾದ ಈ ಜಗಳದಿಂದ ಒಂದು ಗುಂಪಿನ ಮೂವರು ಹಾಗೂ ಮತ್ತೊಂದು ಗುಂಪಿನ ನಾಲ್ವರು ಸಾವಿಗೀಡಾಗಿದ್ದಾರೆ.
ಕ್ರಿಕೆಟ್ ಆಡುವಾಗ ಎರಡು ಮಕ್ಕಳ ಗುಂಪುಗಳ ನಡುವೆ ಜಗಳ ಶುರುವಾಗಿದೆ. ಅವರವರ ಬೆಂಬಲಿಗರು ಬಂದು ತಂಡವನ್ನು ಬೆಂಬಲಿಸಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಾಡಿಸಿದೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ಘರ್ಷಣೆ ಸಂಭವಿಸಿದ್ದು, ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಜಗಳದಲ್ಲಿ ಪಾಲ್ಗೊಂಡ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬೊತಾಬಾದ್ ಎಸ್ಪಿ ಇಜಾಜ್ ಖಾನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
Comments are closed.