ಕ್ರೀಡೆ

ವಿರಾಟ್ ಕೊಹ್ಲಿ, ಮೀರಾಬಾಯಿ ಚಾನು ಹೆಸರು ‘ಖೇಲ್ ರತ್ನ’ ಪ್ರಶಸ್ತಿಗೆ ಶಿಫಾರಸು

Pinterest LinkedIn Tumblr

ನವದೆಹಲಿ: ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಯಾದ ರಾಜಿವ್ ಗಾಂಧಿ ಖೇಲ್ ರತ್ನಾ ಪ್ರಶಸ್ತಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತ ವೇಟ್​​​​ಲಿಫ್ಟರ್ ಮೀರಾಬಾಯ್ ಚಾನು ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ಪ್ರಶಸ್ತಿ ಆಯ್ಕೆ ಸಮಿತಿ ವಿರಾಟ್ ಕೊಹ್ಲಿ ಹಾಗೂ ಮೀರಾಬಾಯ್ ಚಾನು ಅವರ ಹೆಸರನ್ನು ಖೇಲ್ ರತ್ನ’ ಪ್ರಶಸ್ತಿಗೆ ಶಿಫಾರಸು ಮಾಡಿದೆ.

29 ವರ್ಷದ ವಿರಾಟ್ ಕೊಹ್ಲಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(1997) ಹಾಗೂ ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಮಹೇಂದ್ರ ಸಿಂಗ್ ಧೋನಿ(2007) ಅವರ ನಂತರ ಈ ಪ್ರಶಸ್ತಿಗೆ ಬಾಜನರಾಗುತ್ತಿರುವ ಮೂರನೇ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಇನ್ನು ಮೀರಾಬಾಯ್ ಚಾನು ಅವರು 21ನೇ ಕಾಮಲ್​​ವೆಲ್ತ್​ ಕ್ರೀಡಾಕೂಟದ ಮಹಿಳೆಯರ ವೇಟ್​​​​ಲಿಫ್ಟಿಂಗ್​​ನ 48ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದರು. ಆದರೆ ಇಂಜುರಿಯಿಂದ ಈ ಬಾರಿಯ ಏಷ್ಯನ್ ಗೇಮ್ಸ್​ನಿಂದ ಹೊರಗುಳಿದಿದ್ದರು.

Comments are closed.