ಕ್ರೀಡೆ

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಪದವಿಧರೆ; ಚಿತ್ರಗಳು ವೈರಲ್!

Pinterest LinkedIn Tumblr


ಮುಂಬಯಿ: ಭಾರತ ಕ್ರಿಕೆಟ್ ತಂಡದ ಐಕಾನ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಲಂಡನ್‌ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

ಈ ಸಂಬಂಧ 20ರ ಹರೆಯದ ಸಾರಾ, ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿರುವ ಚಿತ್ರಗಳಿಗೆ ವ್ಯಾಪಕ ಪ್ರತಿಕ್ರಿಯೆಗೆ ಗ್ರಾಸವಾಗಿದೆ.

ಸ್ವತ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೇ ತಮ್ಮ ಪುತ್ರಿಯ ಸಾಧನೆ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಇಡೀ ವಿಶ್ವವನ್ನೇ ಗೆದ್ದು ಬರಲು ಟ್ವಿಟರ್‌ನಲ್ಲಿ ವಿಶ್ ಮಾಡಿದ್ದಾರೆ.

ಸಾರಾ ಅವರ ಪದವಿ ಪತ್ರವನ್ನು ಸ್ವೀಕರಿಸುವ ಸಮಾರಂಭಕ್ಕೆ ಅಪ್ಪ ಸಚಿನ್ ಹಾಗೂ ಅಮ್ಮ ಅಂಜಲಿ ಸಾಕ್ಷಿಯಾಗಿದ್ದರು. ಆದರೆ ಕ್ರಿಕೆಟ್‌ನಲ್ಲಿ ತಲ್ಲೀನವಾಗಿರುವ ಸೋದರ ಅರ್ಜುನ್ ತೆಂಡೂಲ್ಕರ್ ಮಾತ್ರ ಎಲ್ಲೂ ಕಾಣಿಸಿಕೊಂಡಿಲ್ಲ.

Comments are closed.