ಕ್ರೀಡೆ

ವಿಶ್ವಕಪ್‌ ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ: ಜೂ.16 ಭಾರತ-ಪಾಕ್‌ ಸೆಣಸಾಟ

Pinterest LinkedIn Tumblr


ಓಲ್ಡ್‌ಟ್ರಾಫ‌ರ್ಡ್‌ : ಇಂಗ್ಲಂಡ್‌ನ‌ಲ್ಲಿ ಮುಂದಿನ ವರ್ಷ ನಡೆಯಲಿರುವ ಸೀಮಿತ ಓವರ್‌ಗಳ ಏಕದಿನ ಪಂದ್ಯಗಳ ವಿಶ್ವ ಕಪ್‌ ಕೂಟದ ವೇಳಾ ಪಟ್ಟಿ ಪ್ರಕಟಗೊಂಡಿದೆ.

ಆ ಪ್ರಕಾರ ಕ್ರಿಕೆಟ್‌ ಜಗತ್ತಿನ ಬದ್ಧ ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ಥಾನ ಜೂನ್‌ 16ರಂದು ಪರಸ್ಪರ ಸೆಣಸಾಡಲಿವೆ.

ಏಕದಿನ ವಿಶ್ವ ಕಪ್‌ ಕೂಟವು ಮೇ 30ರಂದು ಆರಂಭವಾಗಲಿದ್ದು ಆರಂಭಿಕ ಪಂದ್ಯದಲ್ಲಿ ಇಂಗ್ಲಂಡ್‌, ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ.

ಜುಲೈ 9 ಮತ್ತು 11ರಂದು ಅನುಕ್ರಮವಾಗಿ ಓಲ್ಡ್‌ಟ್ರಾಫ್ರ್ಡ್‌ ಮತ್ತು ಎಜ್‌ಬಾಸ್ಟನ್‌ನಲ್ಲಿ ಸೆಮಿ ಫೈನಲ್‌ಪಂದ್ಯಗಳು ನಡೆಯಲಿವೆ. ಕ್ರಿಕೆಟ್‌ ಜಗತ್ತಿನ ಕಾಶಿ ಎಂದೇ ಖ್ಯಾತಿವೆತ್ತಿರುವ ಲಾರ್ಡ್ಸ್‌ ಅಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

2019ರ ಏಕದಿನ ವಿಶ್ವಕಪ್‌ ಕೂಟ ಒಟ್ಟು 46 ದಿನಗಳ ಕಾಲ ನಡೆಯಲಿದ್ದು 45 ಲೀಗ್‌ ಪಂದ್ಯಗಳು ನಡೆಯಲಿವೆ.

ಭಾರತ ಸ್ಪರ್ಧಿಸುವ ಪಂದ್ಯಗಳು ಇಂತಿವೆ : ಜೂನ್‌ 5: ದಕ್ಷಿಣ ಆಫ್ರಿಕ, ಜೂನ್‌ 9 : ಆಸ್ಟ್ರೇಲಿಯ, ಜೂನ್‌ 13 : ನ್ಯೂಜೀಲ್ಯಾಂಡ್‌, ಜೂ.16 : ಪಾಕಿಸ್ಥಾನ, ಜೂ.22: ಅಫ್ಘಾನಿಸ್ಥಾನ, ಜೂ.30 : ಇಂಗ್ಲಂಡ್‌

-ಉದಯವಾಣಿ

Comments are closed.