ಕರಾವಳಿ

ಡೀಸೆಲ್ ದರ ಏರಿಕೆ ಹಿನ್ನೆಲೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಟಿಬಸ್ ಪ್ರಯಾಣ ದರ ಏರಿಕೆ

Pinterest LinkedIn Tumblr

ಮಂಗಳೂರು: ಡೀಸೆಲ್ ದರ ನಿರಂತರವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಎಲ್ಲಾ ಸಿಟಿ ಬಸ್ಸುಗಳ ಪ್ರಯಾಣ ದರವನ್ನು 1 ರೂ.ನಷ್ಟು ಏರಿಕೆ ಮಾಡಲಾಗಿದೆ ಎಂದು ದ.ಕ. ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ.

ಡೀಸೆಲ್ ದರ ನಿರಂತರ ಏರಿಕೆಯಾಗುತ್ತಿದ್ದು, ಉಳಿದಂತೆ ಬಿಡಿ ಭಾಗಗಳು, ಆಯಿಲ್, ಟಯರ್, ಚಾಸಿಸ್ ದರ, ಬಾಡಿ ಬಿಲ್ಡಿಂಗ್, ಇನ್ಶೂರೆನ್ಸ್, ಪ್ರೀಮಿಯಂ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಬಸ್ಸು ನಿರ್ವಹಣಾ ದರ ಗಗನ್ನೇರುತ್ತಿದೆ. ಬಸ್ಸು ನಿರ್ವಹಣಾ ವೆಚ್ಚದಲ್ಲಿ ಆಗುವ ನಷ್ಟವನ್ನು ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ.

ದ.ಕ. ಬಸ್ಸು ಮಾಲಕರ ಸಂಘದ ವತಿಯಿಂದ ಎಲ್ಲಾ ಸಿಟಿ ಬಸ್ಸುಗಳಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಪ್ರಯಾಣ ದರದಲ್ಲಿ ಶೇ.75 ರಿಯಾಯತಿ, ಅದೇರೀತಿ 8ನೆ ತರಗತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಶೇ.60 ರಿಯಾಯತಿ ಪ್ರಯಾಣ ದರವನ್ನು ಎಂದಿನಂತೆ ಮುಂದುವರಿಸಲಾಗುವುದು ಎಂದು ಅಝೀಝ್ ಪರ್ತಿಪ್ಪಾಡಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.