ಕ್ರೀಡೆ

ವೇಗಿ ಅಬಾಟ್ ಬೌನ್ಸರಿಗೆ ಬ್ಯಾಟ್ಸಮನ್ ಗೆ ಗಾಯ

Pinterest LinkedIn Tumblr


ಮೆಲ್ಬರ್ನ್: ಆಸೀಸ್ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಬಲಿಯಾದಂತೆ, ವೇಗಿ ಸೀನ್ ಅಬಾಟ್ ರಿಂದ ಮತ್ತೋರ್ವ ಬ್ಯಾಟ್ಸಮನ್ ಗಾಯಗೊಂಡಿದ್ದಾನೆ.

ಭಾನುವಾರ ನಡೆದ ಶೇಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ನ್ಯೂ ಸೌತ್ ವೇಲ್ಸ್ ತಂಡ ಪ್ರತಿನಿಧಿಸುತ್ತಿದ್ದ ಸೀನ್ ಅಬಾಟ್ ಎಸೆದ ಬೌನ್ಸರ್ ಎಸೆತ ವಿಕ್ಟೋರಿಯಾ ತಂಡದ ವಿಲ್ ಪುಕೋಸ್ಕಿ ಹೆಲ್ಮೆಟ್ ಗೆ ಬಲವಾಗಿ ಅಪ್ಪಳಿಸಿತು. ನೆಲಕ್ಕುರುಳಿದ ವಿಲ್ ಗಾಯಗೊಂಡು ನಿವೃತ್ತಿಯಾದರು. ಚೆಂಡು ಬಡಿದ ಬಳಿಕ ಮೈದಾನ ದಲ್ಲೇ ಚಿಕಿತ್ಸೆ ಪಡೆದ ವಿಲ್ ನಿಮಿಷದ ಬಳಿಕ ಚೇತರಿಸಿಕೊಂಡರು. ಬಳಿಕ ಮೈದಾನದಿಂದ ಹೊರ ನಡೆದಿದ್ದರು. ವಿಲ್ ಸರಿಯಾಗಿ ನಿಲ್ಲಲು ಪರದಾಡು ತ್ತಿರುವಂತೆ ಕಂಡುಬಂದರು.

2014ರ ನವೆಂಬರಿನಲ್ಲಿ ಫಿಲಿಪ್ ಹ್ಯೂಸ್ ಸಾವಿನ ಪ್ರಕರಣ ನೆನಪಿಸುವಂತೆ ಇಂದಿನ ಘಟನೆ ನಡೆಯಿತು. ಅಂದು ಫಿಲಿಪ್ ಹ್ಯೂಸ್ ಬಲಿ ಪಡೆದ ಆಸೀಸ್ ನ ಅದೇ ಬೌಲರ್ ನಿಂದ ಮತ್ತೋರ್ವ ಬ್ಯಾಟ್ಸಮನ್ ತಲೆಗೆ ಬೌನ್ಸರ್ ಬಂದು ತಗುಲಿದೆ. ಇದೀಗ ಗಾಯ ಗೊಂಡಿರುವ ಪುಕೊಸ್ಕಿ ಹಲವು ಬಾರಿ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದಾರೆ. ಕಳೆದ ಋತುವಿನಲ್ಲಿ ಚೊಚ್ಚಲ ಪಂದ್ಯದಲ್ಲಿ ಚೆಂಡು ತಲೆಗೆ ಬಡಿದು ಗಾಯಗೊಂಡಿದ್ದರು. ಮೂರು ತಿಂಗಳ ಬಳಿಕ ಚೇತರಿಸಿಕೊಂಡಿದ್ದರು.

Comments are closed.