ಕರಾವಳಿ

ಕುಡುಪು ಶ್ರೀ ಕ್ಷೇತ್ರ : ಏಕಕಾಲದಲ್ಲಿ 48 ಮಹಾ ಆಶ್ಲೇಷಾ ಬಲಿ

Pinterest LinkedIn Tumblr

ಮಂಗಳೂರು : ಶ್ರೀ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಮಹಾ ಆಶ್ಲೇಷ ಬಲಿ ನಡೆಯಿತು. ಅಂದು ಬೆಳಿಗ್ಗೆ 5ರಿಂದ ಪ್ರಾಯಶ್ಚಿತ ಹೋಮ, 7.30ರಿಂದ ನಾಗವನದಲ್ಲಿ ನಾಗದೇವರಿಗೆ ಕಲಶಾಭಿಷೇಕ, ಪ್ರಸನ್ನ ಪೂಜೆ, ಸರ್ಪ ಸೂಕ್ತ ಹೋಮ,  ಮೃತ್ಯುಂಜಯ ಹೋಮ, ಬ್ರಹ್ಮಚಾರಿ ಆರಾಧನೆ, ಮಧ್ಯಾಹ್ನ 11ಗಂಟೆಗೆ ಮಹಾಪೂಜೆ ನೆರವೇರಿತು.

ಸಂಜೆ 6 ರಿಂದ ದೇವಾಲಯದ ಹೊರಾಂಗಣದಲ್ಲಿ ಏಕಕಾಲದಲ್ಲಿ 48 ಆಶ್ಲೇಷಾ ಬಲಿ ನಡೆಯಿತು. ಬಳಿಕ 7ರಿಂದ ರಾತ್ರಿ ಪೂಜೆ, ನಿತ್ಯ ಬಲಿ ನಡೆಯಿತು.

ಉಡುಪಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ, ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ್.ಭಟ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ಕ್ಷೇತ್ರದ ಮೊಕ್ತೇಸರ ಭಾಸ್ಕರ ಕೆ. ಪ್ರಧಾನ ಕಾರ್ಯದರ್ಶಿ ಕೆ. ಸುಜನ್‌ದಾಸ್ ಕುಡುಪು, ಅನುವಂಶಿಕ ಅರ್ಚಕರಾದ ಪಿ. ಅನಂತ ಭಟ್, ಪ್ರಚಾರ ಸಮಿತಿ ಅಧ್ಯಕ್ಷ ವಾಸುದೇವ ರಾವ್ ಕುಡುಪು, ಪುಷ್ಪರಾಜ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಕೃಷ್ಣ ರಾಜತಂತ್ರಿ, ಪ್ರಧಾನ ಕಾರ್ಯದರ್ಶಿ ಸುಜನ್ ದಾಸ್ ಕುಡುಪು, ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಶರಣ್ ಪಂಪ್ವೆಲ್, ಕಡಂಬೋಡಿ ಮಹಾಬಲ ಪೂಜಾರಿ, ಮನೋಹರ ಭಟ್, ಪ್ರಭಾಕರ ಭಟ್, ಗಣೇಶ್ ಭಟ್, ಪುಷ್ಪರಾಜ ಪೂಜಾರಿ, ಉದಯ ಕುಮಾರ್ ಕುಡುಪು, ನವೀನ್ ಮೂಡುಶೆಡ್ಡೆ ಮುಂತಾದವರು ಮಹಾಪೂಜೆಯಲ್ಲಿ ಉಪಸ್ಥಿತರಿದ್ದರು

ಸಾಂಸ್ಕೃತಿಕ ಕಾರ್ಯಕ್ರಮಗಳು :

ಇದೇ ವೇಳೆ ಮಧ್ಯಾಹ್ನ 2 ರಿಂದ 4.30ರವರೆಗೆ ಮಕ್ಕಳ ಯಕ್ಷಗಾನ ಹಾಗೂ ನೃತ್ಯ ಸಿಂಚನ, ಭಕ್ತಿ ಸಂಗೀತ, ಶಾಸ್ತ್ರೀಯ ವಾದ್ಯ ಸಂಗೀತ ಕಾರ್ಯಕ್ರಮ ಜರಗಿತು.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್, ಮೊಬೈಲ್ ಸಂಖ್ಯೆ : 9035089084

Comments are closed.