ಕರ್ನಾಟಕ

ಕೇಂದ್ರದಿಂದ ಉಳ್ಳವರಿಗೆ ಸಾಲಮನ್ನಾಭಾಗ್ಯ, ರೈತರಿಗೆ ಖಾಲಿ ಭಾಗ್ಯ: ರಾಹುಲ್‌ ಗಾಂಧಿ

Pinterest LinkedIn Tumblr


ಸಿಂಧನೂರು: ಕೇಂದ್ರ ಸರಕಾರ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲಮನ್ನಾ ಮಾಡಲು ನಾಲ್ಕು ವರ್ಷಗಳಿಂದಲೂ ವಿಳಂಬ ಧೋರಣೆ ತೋರುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಿಳಿಸಿದ್ದಾರೆ.

ರಾಯಚೂರು ಸಿಂಧನೂರಿನಲ್ಲಿ ರೈತರ ಜತೆ ರಾಹುಲ್‌ ಗಾಂಧಿ ಸಂವಾದ ನಡೆಸಿದರು. ರೈತರು ಕೇಳಿದ ಪ್ರಶ್ನೆಗೆ ರಾಹುಲ್‌ ಗಾಂಧಿ ಉತ್ತರಿಸಿದರು.

ರೈತರು, ಕಾರ್ಮಿಕರು, ನಾಗರಿಕರು ಹೀಗೆ ಎಲ್ಲರ ಬಳಿಯೂ ಸಮಸ್ಯೆಗಳಿವೆ. ಆದರೆ ಕೇಂದ್ರ ಸರಕಾರಕ್ಕೆ ಇದು ಮಾತ್ರ ಕಾಣಿಸುವುದಿಲ್ಲ ಎಂದು ರಾಹುಲ್‌ ತಿಳಿಸಿದರು.

ಎನ್‌ಡಿಎ ಸರಕಾರ ಕಳೆದ ವರ್ಷ 1 ಲಕ್ಷ 30 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ. ಆದರೆ ರೈತರ ಸಾಲವನ್ನು ಮನ್ನಾ ಮಾಡಿಲ್ಲ. ಇವರದು ಉಳ್ಳವರ ಓಲೈಕೆ ಮಾತ್ರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸಾಲಮನ್ನಾ ಮಾಡಿದರು, ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸರಕಾರ ಕೂಡ ಸಾಲಮನ್ನಾ ಮಾಡಿತು. ಆದರೆ ಮೋದಿ ಸರಕಾರ ಮಾತ್ರ ಕೈ ಕೊಟ್ಟಿದೆ ಎಂದರು.

ಯುಪಿಎ ಸರಕಾರ ಅವಧಿಯಲ್ಲಿ 70 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗಿದೆ. ರೈತರು ನ್ಯಾಯಯುತವಾದ ಬೇಡಿಕೆ ಇಟ್ಟಿದ್ದರೂ ಸರಕಾರ ಜಾಣ ಕಿವುಡು ತೋರುತ್ತಿದೆ ಎಂದು ರಾಹುಲ್‌ ಹೇಳಿದರು.

ಕರ್ನಾಟಕ ಸರಕಾರ ರೈತಪರ ಕೆಲಸವನ್ನು ಮಾಡಿದೆ. ಸಾಲಮನ್ನಾ, ಕೃಷಿ ಹೊಂಡಗಳ ನಿರ್ಮಾಣ, ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಮುಂದೆಯೂ ರೈತರಿಗೆ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ರಾಹುಲ್‌ ಗಾಂಧಿ ತಿಳಿಸಿದರು.

Comments are closed.