ಕ್ರೀಡೆ

ಸಚಿನ್, ಸೌರವ್ ದಾಖಲೆಗಳನ್ನು ಧೂಳಿಪಟ ಮಾಡಿದ ಕೊಹ್ಲಿ

Pinterest LinkedIn Tumblr


ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಂಡದ ಮಾಜಿ ನಾಯಕರಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ಅತ್ಯಂತವಾಗಿ 34 ಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದರು. ಈ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಈ ದಾಖಲೆ ಮಾಡಲು ಸಚಿನ್ ತೆಂಡೂಲ್ಕರ್ ಅವರು 298 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ ಕೇವಲ 197 ಇನ್ನಿಂಗ್ಸ್ ನಲ್ಲೇ ಈ ಸಾಧನೆ ಮಾಡಿದ್ದಾರೆ.

ಇನ್ನು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ತಮ್ಮ ನಾಯಕತ್ವದಲ್ಲಿ ಏಕದಿನ ಕ್ರಿಕೆಟ್ ನಲ್ಲಿ 11 ಶತಕ ಸಿಡಿಸಿದ್ದರು. ಇದೀಗ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ 12 ಶತಕ ಸಿಡಿಸಿದ್ದು ಗಂಗೂಲಿ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ. ಗಂಗೂಲಿ ಒಟ್ಟು 142 ಇನಿಂಗ್ಸ್ ನಲ್ಲಿ 11 ಶತಕ ಸಿಡಿಸಿದ್ದರೇ ಕೊಹ್ಲಿ ಕೇವಲ 43 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ.

ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 34 ಶತಕ ಸಿಡಿಸಿದ್ದಾರೆ. 159 ಎಸೆತಗಳಲ್ಲಿ 12 ಬೌಂಡರಿ 2 ಸಿಕ್ಸರ್ ಸೇರಿದಂತೆ 160 ರನ್ ಬಾರಿಸಿದ್ದರು.

Comments are closed.