ಕರಾವಳಿ

ಮನಪಾ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ

Pinterest LinkedIn Tumblr

ಮಂಗಳೂರು ಫೆಬ್ರವರಿ. 02: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಈ ದಿನಗಳಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಮಹಾಶಿವರಾತ್ರಿ (ಫೆಬ್ರವರಿ 13), ಶ್ರೀ ರಾಮ ನವಮಿ (ಮಾರ್ಚ್ 25), ಮಹಾವೀರ ಜಯಂತಿ (ಮಾರ್ಚ್ 29), ಡಾ: ಬಿ.ಆರ್. ಅಂಬೇಡ್ಕರ್ ಜಯಂತಿ (ಏಪ್ರಿಲ್ 14), ಬುದ್ಧ ಪೂರ್ಣಿಮ (ಏಪ್ರಿಲ್ 30), ಶ್ರೀಕೃಷ್ಣ ಜನ್ಮಾಷ್ಟಮಿ (ಸಪ್ಟೆಂಬರ್ 2), ವರಸಿದ್ಧಿ ವಿನಾಯಕ ವೃತ (ಸಪ್ಟೆಂಬರ್ 13), ಗಾಂಧಿ ಜಯಂತಿ (ಅಕ್ಟೋಬರ್ 2), ಸೈಂಟ್ ಟಿ ಎಲ್ ವಾಸ್‍ವಾನಿ ಜಯಂತಿ (ನವೆಂಬರ್ 25). ಈ ದಿನಗಳಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಿತ ದಿನಗಳೆಂದು ಘೋಷಿಸಲಾಗಿದೆ.

ಹಾಗೆಯೇ ಸದ್ರಿ ನಿಷೇಧಿತ ದಿನಗಳಂದು ಪಾಲಿಕೆಯ ಕಸಾಯಿಖಾನೆಗಳನ್ನು ಮುಚ್ಚುವಂತೆ ಆದೇಶಿಸಿ ಸರಕಾರದಿಂದ ಆಗ್ಗಿಂದಾಗೆ ಹೊರಡಿಸಲಾಗುವ ಸುತ್ತೋಲೆ/ಆದೇಶಗಳಿಗೆ ಬದ್ಧವಾದ ಮಾಂಸಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆಯುಕ್ತರು, ಮಹಾನಗರಪಾಲಿಕೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.