ಕರಾವಳಿ

ನವದೆಹಲಿ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಮಂಗಳೂರು ವಿವಿ ಎನ್‌ಎಸ್‌ಎಸ್‌ನ 7 ವಿದ್ಯಾರ್ಥಿಗಳು ಆಯ್ಕೆ

Pinterest LinkedIn Tumblr

ಮಂಗಳೂರು ಜನವರಿ 25 : ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನದ ಪಥಸಂಚಲನದಲ್ಲಿ ಭಾಗವಹಿಸಲು ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ ಏಳು ಮಂದಿ ಸ್ವಯಂಸೇವಕರು ಆಯ್ಕೆಯಾಗಿದ್ದಾರೆ.

ಜನವರಿ 1ರಿಂದ 31ರವರೆಗೆ 1 ತಿಂಗಳು ಪೂರ್ತಿ ನವದೆಹಲಿಯಲ್ಲಿ ನಡೆಯಲಿರುವ ತರಬೇತಿಯಲ್ಲಿ ಭಾಗವಹಿಸಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯ/ನಿರ್ದೇಶನಾಲಯದಿಂದ ಆಯ್ಕೆಯಾದ ಒಟ್ಟು 14 ಮಂದಿಯಲ್ಲಿ ಈ ಏಳು ಮಂದಿ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರತಿನಿಧಿಸಲಿದ್ದಾರೆ.

ಆಯ್ಕೆಯಾದವರ ವಿವರ: ಮಂಜುನಾಥ ಗೋವಿಂದದಾಸ ಕಾಲೇಜು ಸುರತ್ಕಲ್, ಧನುಶ್ ಕೆ.ಪಿ. ಎಸ್.ಡಿ.ಎಂ. ಕಾಲೇಜು ಉಜಿರೆ, ಸನತ್ ಕೋಟ್ಯಾನ್ ಪೂರ್ಣಪ್ರಜ್ಞ ಕಾಲೇಜು ಉಡುಪಿ, ಪ್ರಸಾದ್ ಎಂ.ಜಿ.ಎಂ. ಕಾಲೇಜು ಉಡುಪಿ, ಶಿಕ್ಷಿತಾ ಸಂತ ಆಗ್ನೇಸ್ ಕಾಲೇಜು ಮಂಗಳೂರು, ಚಿಂತನಾ ಐ.ಡಿ. ರೋಶನಿ ನಿಲಯ ಮಂಗಳೂರು, ಪ್ರಶ್ವಿಜಾ ಕೆ.ಎಸ್. ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ,

Comments are closed.