ಕ್ರೀಡೆ

ಡೋಪಿಂಗ್ ಉಲ್ಲಂಘನೆ; ಯೂಸುಫ್‌ಗೆ 5 ತಿಂಗಳ ನಿಷೇಧ

Pinterest LinkedIn Tumblr


ಹೊಸದಲ್ಲಿ: ಉದ್ದೀಪನಾ ದ್ರವ್ಯ ಉಲ್ಲಂಘನೆ ಸಂಬಂಧ ಭಾರತೀಯ ಆಲ್‌ರೌಂಡರ್ ಯೂಸುಫ್ ಪಠಾಣ್ ಐದು ತಿಂಗಳುಗಳ ಕಾಲ ನಿಷೇಧಕ್ಕೊಳಗಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಿಷೇಧಿತ ದ್ರವ್ಯ ಸೇವನೆ ಸಂಬಂಧ ಪಠಾಣ್ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐದು ತಿಂಗಳುಗಳ ನಿಷೇಧವನ್ನು ಹೇರಿತ್ತು.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ರಣಜಿ ಟ್ರೋಫಿಗೂ ಪಠಾಣ್ ಆಯ್ಕೆ ಮಾಡದಂತೆ ಬರೋಡಾ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐ ಆದೇಶ ಹೊರಡಿಸಿತ್ತು.

2017 ಮಾರ್ಚ್ 16ರಂದು ನವದಿಲ್ಲಿಯಲ್ಲಿ ಸಾಗಿದ ದೇಶೀಯ ಪಂದ್ಯವೊಂದರ ವೇಳೆ ಬಿಸಿಸಿಐ ಉದ್ದೀಪನಾ ತಡೆ ಘಟಕವು ಪಠಾಣ್ ಅವರನ್ನು ಮೂತ್ರ ಪರೀಕ್ಷೆಗೊಳಪಡಿಸಿತ್ತು. ಈ ವೇಳೆ ನಿಷೇಧಿತ ಮದ್ದು ಸೇವನೆ ಕಂಡುಬಂದಿತ್ತು ಎಂಬುದನ್ನು ಸ್ಪಷ್ಟಪಡಿಸಿದೆ.

2017 ಆಗಸ್ಟ್ 15ರಿಂದಲೇ ಪಠಾಣ್ ನಿಷೇಧ ಜಾರಿಗೆ ಬಂದಿದ್ದು 2018 ಜನವರಿ 14ರ ವರೆಗೆ ಮುಂದುವರಿಯಲಿದೆ.

2017 ಅಕ್ಟೋಬರ್ 27ರಂದು ಪಠಾಣ್ ಮೇಲೆ ಕಮಿಷನ್, ಆರೋಪವನ್ನು ಹೊರಿಸಿತ್ತು. ಬಳಿಕ ನಿಷೇಧಿತ ಮದ್ದನ್ನು ಅಜಾಗರೂಕತೆಯಿಂದ ಸೇವಿಸಲಾಗಿದೆ ಎಂಬ ಪಠಾಣ್ ವಿವರಣೆಯಿಂದ ತೃಪ್ತಪಟ್ಟುಕೊಂಡಿರುವ ಮಂಡಳಿ, ಐದು ತಿಂಗಳುಗಳ ಕಾಲ ನಿಷೇಧವನ್ನು ವಿಧಿಸಿತ್ತು.

2008ರಿಂದ 2012ರ ಅವಧಿಯಲ್ಲಿ ಪಠಾಣ್ ಭಾರತದ ಪರ 57 ಏಕದಿನ ಹಾಗೂ 22 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಹಾಗೆಯೇ 2007 ಟ್ವೆಂಟಿ-20 ಹಾಗೂ 2011 ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದ್ಯಸರೂ ಆಗಿದ್ದಾರೆ.

Comments are closed.