ಕರ್ನಾಟಕ

ಹೊಸವರ್ಷದಂದು 12.05 ಕ್ಕೆ ಹೆಣ್ಣುಮಗು ಜನನ.. ಬಿಬಿಎಂಪಿಯಿಂದ ದಂಪತಿಗೆ ಸಿಕ್ತು ಭರ್ಜರಿ ಗಿಫ್ಟ್!

Pinterest LinkedIn Tumblr

ಬೆಂಗಳೂರು: ಬೆಂಗಳೂರು ಮೇಯರ್ ಸಂಪತ್ ರಾಜ್ ಅವರು ಈ ಹಿಂದೆ ಘೋಷಿಣೆ ಮಾಡಿದಂತೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರು.ಮೌಲ್ಯದ ಚೆಕ್ ವಿತರಣೆ ಮಾಡಿದ್ದಾರೆ.

ಈ ಹಿಂದೆ ಮೇಯರ್ ಸಂಪತ್ ರಾಜ್ ಅವರು ಹೊಸ ವರ್ಷಾಚರಣೆ ನಿಮಿತ್ತ ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರು.ಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ನಿನ್ನೆ ರಾಜಾಜಿನಗರದ ಭಾಷ್ಯಂ ಸರ್ಕಲ್ ನಲ್ಲಿರುವ ಡಾ.ನಾಗರಾಜ್ ಸ್ಮಾರಕ ಆಸ್ಪತ್ರೆಯಲ್ಲಿ ರಾತ್ರಿ 2.5ಕ್ಕೆ ಹೆಣ್ಮು ಮಗು ಜನಿಸಿದ್ದು, ಈ ಮಗುವಿನ ಪೋಷಕರಾದ ಪುಷ್ಪಾ-ಗೋಪಿ ದಂಪತಿಗೆ ಮೇಯರ್ ಸಂಪತ್ ರಾಜ್ ಅವರು ಇಂದು 5 ಲಕ್ಷ ರು.ಗಳ ಚೆಕ್ ವಿತರಿಸಿ ಶುಭ ಹಾರೈಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಹೊಸ ವರ್ಷದಂದು ಜನಿಸಿದ ಮೊದಲ ಹೆಣ್ಣು ಮಗು ಇದಾಗಿದೆ ಎಂದು ಪಾಲಿಕೆಯ ಮುಖ್ಯ ಆರೋಗ್ಯ ಅಧಿಕಾರಿ ನಿರ್ಮಲಾ ಬುಗ್ಗಿ ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮೇಯರ್ ಅವರು 5 ಲಕ್ಷ ರು. ಮೊತ್ತದ ಚೆಕ್ ನ್ನು ಮಗುವಿನ ಹೆಸರಿನಲ್ಲಿ ಡೆಪಾಸಿಟ್ ಮಾಡಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

ಈ ದಂಪತಿಗೆ ಮೇಯರ್ ಸಂಪತ್ ರಾಜ್ ಅವರು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Comments are closed.