ಕ್ರೀಡೆ

ದೋನಿ ಕಾಶ್ಮೀರ ಭೇಟಿ ವೇಳೆ ಸ್ಥಳೀಯರಿಂದ ಶಾಹಿದ್‌ ಆಫ್ರಿದಿ, ಪಾಕ್‌ ಪರ ಘೋಷಣೆ!

Pinterest LinkedIn Tumblr

ಶ್ರೀನಗರ: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯನ್ನು ಹೊಂದಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ದೋನಿ ಇತ್ತೀಚಿಗೆ ಜಮ್ಮ–ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯರು ಬೂಮ್‌ ಬೂಮ್‌ ಆಫ್ರಿದಿ ಎಂದು ಹಾಗೂ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ.

ಭಾರತೀಯ ಸೇನೆ ಶ್ರೀನಗರದಿಂದ 35 ಕಿ.ಮೀ ದೂರದ ಕುನ್ಜರ್‌ನಲ್ಲಿ ಸೌಹಾರ್ದಯುತ್ತ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋಜಿಸಿತ್ತು. ಈ ಪಂದ್ಯಕ್ಕೆ ದೋನಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ವೇಳೆ ಕೆಲ ಸ್ಥಳೀಯರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಆಫ್ರಿದಿ ಹಾಗೂ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಾರ್ಯಕ್ರಮಕ್ಕೆ ದೋನಿ ಆಗಮಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಪಾಕ್‌ ಪರ ಘೋಷಣೆ ಕೂಗುತ್ತಿದ್ದು, ಭಾರತೀಯ ಯೋಧರು ಅವರನ್ನು ದೂರ ಕಳುಹಿಸುತ್ತಿರುವುದು ವಿಡಿಯೊದಲ್ಲಿ ಚಿತ್ರೀಕರಣವಾಗಿದೆ.

ಇದೇ ವೇಳೆ ಮಾತನಾಡಿದ ಎಂ.ಎಸ್‌.ದೋನಿ, ‘ಭಾರತ –ಪಾಕಿಸ್ತಾನ ರಾಷ್ಟ್ರಗಳ ನಡುವಿನ ಕ್ರಿಕೆಟ್‌ ಸರಣಿ ಕ್ರೀಡೆಗಿಂತಲ್ಲೂ ಹೆಚ್ಚು ಮಹತ್ವದಾಗಿದೆ. ಪ್ರಸ್ತುತ ಸರಣಿ ಆಡುವ ನಿರ್ಧಾರ ಸರಳವಾಗಿಲ್ಲ. ಇದು ರಾಜತಾಂತ್ರಿಕ ಮತ್ತು ರಾಜಕೀಯ ನಿರ್ಧಾರವಾಗಿದೆ. ಈ ಕುರಿತು ಎರಡು ರಾಷ್ಟ್ರಗಳ ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ಎರಡು ರಾಷ್ಟ್ರಗಳ ನಡುವೆ 2007ರಲ್ಲಿ ಟೆಸ್ಟ್‌ ಸರಣಿ ನಡೆದಿತ್ತು. ಜತೆಗೆ, 2012ರಲ್ಲಿ ಏಕದಿನ ಹಾಗೂ ಟಿ–20 ಸರಣಿ ದ್ವಿಪಕೀಯ ಸರಣಿ ನಡೆದಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ನೇತೃತ್ವದಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ, ಟಿ–20 ವಿಶ್ವಕಪ್‌ ಹಾಗೂ ವಿಶ್ವಕಪ್‌ ಟೂರ್ನಿಗಳಲ್ಲಿ ಉಭಯ ತಂಡಗಳು ಭಾಗವಹಿಸಿದ್ದವು.

Comments are closed.