ಮನೋರಂಜನೆ

ಕಮಲ್‌ ಹಾಸನ್‌ ಹಣೆಗೆ ಗುಂಡಿಕ್ಕಿ ಎಂದ ಹಿಂದೂ ಮಹಾಸಭಾ ಅಧ್ಯಕ್ಷ

Pinterest LinkedIn Tumblr


ಚೆನ್ನೈ: ಹಿಂದೂ ಭಯೋತ್ಪಾದನೆ ಇದೆ ಎಂದು ಹೇಳಿ ಚರ್ಚೆಗೆ ಗ್ರಾಸವಾಗಿದ್ದ ನಟ ಕಮಲ್‌ ಹಾಸನ್‌ ಹೇಳಿಕೆ ನಿಜವೇ ಎಂದು ಪ್ರಶ್ನೆ ಎದ್ದ ಬೆನ್ನಲ್ಲೇ, ಕಮಲ್‌ಹಾಸನ್ ಹೇಳಿಕೆ ನಿಜ ಎಂದು ನಿರೂಪಿಸಲು ಅಖಿಲ ಭಾರತೀಯ ಹಿಂದೂ ಮಹಾಸಭಾ ತಯಾರಾಗಿದೆ.

ಹೌದು! ಕೆಲ ದಿನಗಳ ಹಿಂದೆ ಹಿಂದೂ ಭಯೋತ್ಪಾದನೆ ಕುರಿತು ಲೇಖನ ಬರೆದಿದ್ದ ನಟ ಕಮಲ್‌ ಹಾಸನ್‌, ಬಲಪಂಥೀಯ ಸಂಘಟನೆಗಳು ಹಿಂಸಾಚಾರಕ್ಕೆ ಮುಂದಾಗುತ್ತಿವೆ, ಇವರೊಂದಿಗೆ ವಾದಕ್ಕೆ ಇಳಿದರೆ ಹಿಂಸೆಯನ್ನು ಅನುಸರಿಸುತ್ತಾರೆ. ಬಲಪಂಥೀಯರಲ್ಲೂ ಭಯೋತ್ಪಾದಕರು ಇದ್ದಾರೆ ಎಂದು ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

ಶುಕ್ರವಾರದಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ಕಮಲ್‌ರನ್ನು ಶೂಟ್‌ ಮಾಡಿ ಕೊಲೆ ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ಕಮಲ್‌ ಮಾತನ್ನು ನಿಜ ಮಾಡಲು ಮುಂದಾಗಿದೆ.

ಟೈಮ್ಸ್‌ ಆಫ್‌ ಇಂಡಿಯಾಗೆ ಹೇಳಿಕೆ ನೀಡಿರುವ ಹಿಂದೂ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ ಅವರು, ಕಮಲ್‌ ಹಾಗೂ ಅವರಂತೆ ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡುವ ಪ್ರತಿಯೊಬ್ಬರ ಹಣೆ ಶೂಟ್‌ ಮಾಡಬೇಕು ಇಲ್ಲವೇ ನೇಣು ಹಾಕಬೇಕು. ಏಕೆಂದರೆ ಹಿಂದೂ ನಂಬಿಕೆಯನ್ನು ಪ್ರಶ್ನಿಸುವ ಮತ್ತು ಅದರ ಆಚಾರವನ್ನು ದ್ವೇಷಿಸುವ ಮನೋಭಾವದವರಿಗೆ ಈ ಪುಣ್ಯ ಭೂಮಿಯಲ್ಲಿ ಬದುಕುವ ಹಕ್ಕಿಲ್ಲ’ ಎಂದು ಶರ್ಮಾ ಹೇಳಿದ್ದಾರೆ.

ಇದೇ ವೇಳೆ ಇವರ ಚಿತ್ರಗಳನ್ನು ನಿಷೇಧಿಸಬೇಕು ಎಂದು ಹೇಳಿರುವ ಮೀರತ್‌ನ ಹಿಂದೂ ಸಭಾ ಅಧ್ಯಕ್ಷ ಅಭಿಶೇಕ್‌ ಅಗರ್ವಾಲ್‌ , ಹಿಂದೂ ಧರ್ಮದ ವಿರುದ್ಧ ಹೇಳಿರುವ ಕಮಲ್‌ ಹಾಗೂ ಅವರ ಕುಟುಂಬದವರು ನಟಿಸಿರುವ ಚಿತ್ರವನ್ನು ಎಲ್ಲಾ ಪಕ್ಷಗಳು ನಿಷೇಧಿಸಬೇಕು. ಎಲ್ಲಾ ಭಾರತೀಯರು ಈ ವಿಚಾರದಲ್ಲಿ ಒಂದಾಗಿರಬೇಕು ಎಂದು ಅಗರ್ವಾಲ್‌ ಆಗ್ರಹಿಸಿದ್ದಾರೆ.

Comments are closed.