ಕ್ರಿಕೆಟಿಗ ಇರ್ಫಾನ್ ಪಠಾಣ್ ಮತ್ತು ಸಫಾ ಬೇಗ್ ಗೆ ಗಂಡು ಮಗು ಜನಿಸಿದ್ದು ಶುಭಾಶಯ ಕೋರಿದ್ದ ವ್ಯಕ್ತಿಯೊಬ್ಬ ಮಗುವಿಗೆ ದಾವೂದ್-ಯಾಕೂಬ್ ಎಂದು ಹೆಸರಿಡಬೇಡಿ ಎಂದು ವ್ಯಂಗ್ಯವಾಡಿದ್ದು ಇದಕ್ಕೆ ಇರ್ಫಾನ್ ದಿಟ್ಟ ಉತ್ತರ ನೀಡಿದ್ದಾರೆ.
ಟ್ವೀಟರ್ ನಲ್ಲಿ ದಿವ್ಯಾನ್ಷು ಎನ್ನುವವರು ಇರ್ಫಾನ್ ಗೆ ಶುಭಾಶಯ ಹೇಳಿ ಮಗುವಿಗೆ ದಾವೂದ್, ಯಾಕೂಬ್ ಹೆಸರಿಡಬೇಡಿ ಎಂದು ವ್ಯಂಗ್ಯವಾಡಿದ್ದ ಇದಕ್ಕೆ ಉತ್ತರಿಸಿರುವ ಇರ್ಫಾನ್ ದಿವ್ಯಾನ್ಷು ಅವರೇ ನನ್ನ ಮಗ ಅಪ್ಪ ಮತ್ತು ದೊಡ್ಡಪ್ಪನಂತೆ ದೇಶಕ್ಕೆ ಒಳ್ಳೆಯ ಹೆಸರು ತರುತ್ತಾರೆ ಎಂದು ಇರ್ಫಾನ್ ಉತ್ತರಿಸಿದ್ದಾರೆ. ಅಲ್ಲದೆ ನನ್ನ ಮಗನಿಗೆ ಮನೆ ಮಂದಿಗೆ ಮೆಚ್ಚುಗೆಯಾಗಿರುವ ಇಮ್ರಾನ್ ಪಠಾಣ್ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.
ತನ್ನ ತಪ್ಪಿನ ಅರಿವಾದ ದಿವ್ಯಾನ್ಷು ರೀ ಟ್ವೀಟ್ ಮಾಡಿ ನಾನು ತಪ್ಪಾಗಿ ಹೇಳಿದ್ದರೆ ನನ್ನನ್ನು ಕ್ಷಮಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ ಪುತ್ರನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಿದ್ದು ತೀವ್ರ ಟೀಕೆಗಳಿಗೆ ಕಾರಣವಾಗಿತ್ತು.
@MSDivyanshu naam chahe jo bhi rakhenge lekin Ek baat Pakki hai wo bhi papa or bade papa ki tarah is mulk ka naam Roshan hi karega #withlove
— Irfan Pathan (@IrfanPathan) December 22, 2016
@IrfanPathan I am really really sorry If I said something wrong
— Divyanshu Raj (@MSDivyanshu) December 27, 2016