ಕ್ರೀಡೆ

ರಾಜಕೀಯಕ್ಕೆ ಪ್ರವೇಶಿಸುವ ವದಂತಿ ಹರಡದಿರಿ: ಟ್ವಿಟರ್‌ ನಲ್ಲಿ ಹರಭಜನ್‌ ಸಿಂಗ್‌

Pinterest LinkedIn Tumblr

harbhajan
ಪಂಜಾಬ್‌: ‘ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಯಾವುದೇ ಆಲೋಚನೆಗಳನ್ನು ಮಾಡಿಲ್ಲ. ದಯಮಾಡಿ ಈ ಬಗ್ಗೆ ಯಾರೂ ವದಂತಿಗಳನ್ನು ಹರಡಬೇಡಿ’ ಎಂದು ಭಾರತ ಕ್ರಿಕೆಟ್‌ ತಂಡದ ಖ್ಯಾತ ಆಫ್‌ಸ್ಪಿನ್ನರ್‌ ಹರ್‌ಭಜನ್‌ಸಿಂಗ್‌ ಟ್ಟೀಟ್‌ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಮಾಧ್ಯಮಗಳಲ್ಲಿ ಹರ್‌ಭಜನ್‌ ಕಾಂಗ್ರೆಸ್‌ ನಿಂದ ಟಿಕೆಟ್‌ ಪಡೆದು ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಸುದ್ದಿ ಹರಡಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು ಅಂತಹ ಯಾವುದೇ ಆಲೋಚನೆಗಳಿಲ್ಲ ಎಂದು ಸ್ಪಪ್ಟ ಪಡಿಸಿದ್ದಾರೆ.

ಪ್ರಸ್ತುತ ಜಲಂಧರ್‌ನ ಚುನಾವಣಾ ಆಯೋಗದ ರಾಯಭಾರಿಯಾಗಿರುವ ಹರ್‌ಭಜನ್‌ ಚುನಾವಣಾ ಆಯೋಗಕ್ಕೂ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ನವೆಂಬರ್‌ 28 ರಂದು ಭಾರತೀಯ ಜನತಾ ಪಕ್ಷದ ನವಜೋತ್‌ ಕೌರ್‌ ಸಿಧು ಭಾಜಪ ತೊರೆದು ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದರು. ಬಳಿಕ ತಮ್ಮ ಪತಿ ನವಜೋತ್‌ ಸಿಂಗ್‌ ಸಿಧು ಅವರೂ ಸಹ ಸದ್ಯದಲ್ಲೇ ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಡಿಸೆಂಬರ್‌ 15ರಂದು ಕಾಂಗ್ರೆಸ್‌, ಪಕ್ಷದ ಮುಖ್ಯಸ್ಥ ಅಮರಿಂದರ್‌ ಸಿಂಗ್‌ ಹಾಗೂ ಮಾಜಿ ಹಣಕಾಸು ಸಚಿವ ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಸೇರಿದಂತೆ 61 ಮಂದಿಯನ್ನೊಳಗೊಂಡ ಮೊದಲ ಹಂತದ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು.

I have no intentions of joining politics any time soon. Please stop spreading rumors.
Follow
Harbhajan Turbanator ✔ @harbhajan_singh
I have no intentions of joining politics any time soon. Please stop spreading rumors.
11:31 AM – 22 Dec 2016
262 262 Retweets 1,166 1,166 likes

Comments are closed.