ಮನೋರಂಜನೆ

ದೇವರು ಒಳ್ಳೆಯವರನ್ನು ಕೂಡ ನಮ್ಮ ಮಧ್ಯೆ ಇಟ್ಟಿರುತ್ತಾನೆ: ಟ್ರೋಲ್ಸ್, ನೆಗೆಟಿವ್ ಕಾಮೆಂಟ್‌ನಿಂದ ಬೇಸತ್ತ ನಟಿ ಭೂಮಿಕಾ ಚಾವ್ಲಾ

Pinterest LinkedIn Tumblr


ಪ್ರಖ್ಯಾತ ನಟಿ ಭೂಮಿಕಾ ಚಾವ್ಲಾ ಅವರು ಅವರ ಅಭಿಮಾನಿಗಳಿಗೆ, ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ, ಟ್ರೋಲ್ಸ್‌ನವರಿಗೆ ವಿಶೇಷವಾದ ಪತ್ರವೊಂದನ್ನು ಬರೆದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ದೇವರು ಒಳ್ಳೆಯವರನ್ನು ಕೂಡ ನಮ್ಮ ಮಧ್ಯೆ ಇಟ್ಟಿರುತ್ತಾನೆ: ಭೂಮಿಕಾ
‘ನಿಮ್ಮ ಸಮಯವನ್ನು ನೀವು ಪಾಸಿಟಿವ್ ಆಗಿರಲು ಬಳಸಿಕೊಳ್ಳಿ, ವಿನಾಕಾರಣ ಬೇರೆಯವರ ಮನಸ್ಸಿಗೆ ನೋವನ್ನುಂಟು ಮಾಡುವ ಮಾತುಗಳನ್ನು ಆಡಬೇಡಿ. ಕೆಟ್ಟದಾಗಿ, ಒಳ್ಳೆಯದಾಗಿ, ಇಮೋಜಿ ಹಾಕಿರುತ್ತೀರಿ. ಧನ್ಯವಾದಗಳು. ಬೆಳೆಯಲು ಅವಕಾಶ ಮಾಡಿಕೊಡುವ, ಪ್ರೇರೇಪಿಸುವ ಕಾಮೆಂಟ್‌ಗಳನ್ನು ಹಾಕಿದ್ದರೆ ಕಲಾವಿದರು ಅದನ್ನು ಸ್ವೀಕರಿಸಿ ಮುಂದೆ ನಡೆಯುತ್ತಾರೆ. ದೇವರು ಒಳ್ಳೆಯವರನ್ನು ಕೂಡ ನಮ್ಮ ಮಧ್ಯೆ ಇಟ್ಟಿರುತ್ತಾನೆ’ ಎಂದು ಭೂಮಿಕಾ ಅಭಿಪ್ರಾಯ ಪಟ್ಟಿದ್ದಾರೆ.

ನಾನು ದೊಡ್ಡ ಸೆಲೆಬ್ರಿಟಿಯಲ್ಲ ಎಂದ ಭೂಮಿಕಾ
ಇನ್ನೂ ಕೆಲವರು ಕೆಟ್ಟದಾಗಿ, ಅಸಭ್ಯವಾಗಿ ಕಾಮೆಂಟ್ ಮಾಡಿರುತ್ತೀರಿ. ಅವುಗಳನ್ನು ಬ್ಲಾಕ್ ಮಾಡಬಹುದು, ಡಿಲಿಟ್ ಮಾಡಬಹುದು. ಇದು ನನ್ನ ಆಯ್ಕೆಯಾಗಿರುತ್ತದೆ. ನಾನು ದೊಡ್ಡ ಸೆಲೆಬ್ರಿಟಿಯಲ್ಲ. ನಾನು ಇಂದು ಹೇಗಿದ್ದೇನೋ ಅದರಲ್ಲಿ ನನಗೆ ಖುಷಿಯಿದೆ. ಕಲಾವಿದರು, ಉದ್ಯಮಿ, ಕ್ರೀಡಾಳು, ಬರಹಗಾರರನ್ನು ನೀವು ಅನುಸರಿಸಬಹುದು. ಒಮ್ಮೆ ವಿಷವನ್ನು ಹೊರಹಾಕೋದು, ಒಮ್ಮೆ ಒಳಿತನ್ನು ಮಾಡೋದು, ಬೇರೆಯವರ ಜೊತೆ ಡಿಸ್ಕಶನ್ ಮಾಡೋದು ಮಾಡಬೇಡಿ. ಪಾಸಿಟಿವ್ ಆಗಿರಿ ಎಂದು ಭೂಮಿಕಾ ಚಾವ್ಲಾ ಹೇಳಿದ್ದಾರೆ.

ಕನ್ನಡದಲ್ಲಿ ನಟಿಸಿದ್ದ ಭೂಮಿಕಾ ಚಾವ್ಲಾ!
2015ರಲ್ಲಿ ತೆಲುಗಿನ ‘ಲವ್ ಯು ಆಲಿಯಾ’ ಸಿನಿಮಾದಲ್ಲಿ ಭೂಮಿಕಾ ಚಾವ್ಲಾ ನಟಿಸಿದ್ದರು. ‘ಎಂ ಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ಯಲ್ಲೂ ಕೂಡ ಆಲಿಯಾ ಅಭಿನಯಿಸಿದ್ದರು. 2017ರಲ್ಲಿ ಭೂಮಿಕಾ ನಟನೆಯ ‘ಮಿಡಲ್ ಕ್ಲಾಸ್ ಅಬ್ಬಾಯಿ’ ಸಿನಿಮಾ ರಿಲೀಸ್ ಆಗಿತ್ತು. ‘ಯು ಟರ್ನ್’, ‘ಸವ್ಯಸಾಚಿ’, ‘ರೂಲರ್’ ಸಿನಿಮಾದಲ್ಲಿ ಭೂಮಿಕಾ ನಟಿಸಿದ್ದರು. ‘ಸೀಟಿಮಾರ್’ ಸಿನಿಮಾದಲ್ಲಿ ಗೋಪಿಚಂದ್, ತಮನ್ನಾ ಜೊತೆಗೆ ಭೂಮಿಕಾ ನಟಿಸುತ್ತಿದ್ದಾರೆ. 2000ರಲ್ಲಿ ತೆಲುಗಿನ ‘ಯುವುಕುಡು’ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಭೂಮಿಕಾ ಚಾವ್ಲಾ ಅವರು ತೆಲುಗು, ತಮಿಳು, ಮಲಯಾಳಂ, ಕನ್ನಡ, ಭೋಜಪುರಿ, ಪಂಜಾಬಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಉಪೇಂದ್ರ ನಟನೆಯ ‘ಗಾಡ್ ಫಾದರ್’ಮ ರವಿಚಂದ್ರನ್ ನಟನೆಯ ‘ಲವ್ ಯು ಆಲಿಯಾ’ ಸಿನಿಮಾದಲ್ಲಿ ಭೂಮಿಕಾ ನಟಿಸಿದ್ದರು.

Comments are closed.