ಮನೋರಂಜನೆ

ನೆರೆಹೊರೆಯವರು ಬಿಸಾಕಿದ ಆಹಾರವನ್ನ ನಾವು ತಿನ್ನತಾ ಇದ್ದೀವಿ: ನಟಿ ರಾಖಿ ಸಾವಂತ್

Pinterest LinkedIn Tumblr


ಮುಂಬೈ: ಸದಾ ಕಾಂಟ್ರವರ್ಸಿ ನಿಂದಲೇ ಸದ್ದು ಮಾಡುವ ರಾಖಿ ಸಾವಂತ್ ಮೊದಲ ಬಾರಿಗೆ ತಮ್ಮ ಬಾಲ್ಯದ ನೆನಪುಗಳನ್ನು ಹೇಳಿ ಕಣ್ಣೀರು ಹಾಕಿದ್ದಾರೆ. ಸಂದರ್ಶನದ ಕ್ಲಿಪ್ ನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಾಖಿ ಸಾವಂತ್, ಒಳ್ಳೆಯ ಜೀವನವನ್ನು ನೀಡಿದ ಜೀಸಸ್ ಕ್ರೈಸ್ತನಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಆರಂಭದಲ್ಲಿ ನಿರೂಪಕ ರಾಜೀವ್, ಈ ಶೋ ನಂತರ ಯಾವುದೇ ಕಾಂಟ್ರವರ್ಸಿ ಸುದ್ದಿಗಳು ಬಿತ್ತರವಾಗಬಾರದು. ಹಾಗಾಗಿ ನಾವು ಇಂದು ರಾಖಿ ಸಾವಂತ್ ಅವರ ಜೊತೆ ಮಾತನಾಡಲ್ಲ. ಬದಲಾಗಿ ನಿಮಗೆ ಗೊತ್ತಿರದ ನಿರು ಬೇಡಾರನ್ನು ನಾವು ಪರಿಚಯಿಸುತ್ತಿದ್ದೇವೆ ಎಂದು ಹೇಳುತ್ತಾರೆ. ನಿರು ಬೇಡಾ ಎಂದ ಕೂಡಲೇ ರಾಖಿ ಸಾವಂತ್ ಅದು ನನ್ನ ಬಾಲ್ಯದ ಹೆಸರು ಎಂದು ಹೇಳಿದ್ದಾರೆ.

ನಿಮ್ಮ ಬಾಲ್ಯ ಹೇಗಿತ್ತು ಎಂದು ನಿರೂಪಕ ಪ್ರಶ್ನಿಸಿದಾಗ ಭಾವುಕರಾದ ರಾಖಿ ಸಾವಂತ್, ಒಂದು ಹೊತ್ತಿನ ಊಟ ಸಹ ನಮಗೆ ಸಿಗುತ್ತಿರಲಿಲ್ಲ. ಅಮ್ಮ ಇಟ್ಟಿಗೆಗಳಿಂದ ಮಾಡಿದ ಒಲೆಯ ಮೇಲೆ ಅಡುಗೆ ಮಾಡುತ್ತಿದ್ದರು. ನೆರೆಹೊರೆಯವರು ಬಿಸಾಕಿದ ಆಹಾರವನ್ನ ನಾವು ತಿನ್ನತಾ ಇದ್ದೀವಿ ಎಂದು ಅಮ್ಮ ಹೇಳುತ್ತಿರುತ್ತಾರೆ. ಅಷ್ಟು ಕಷ್ಟದಲ್ಲಿಯೇ ನನ್ನ ಬಾಲ್ಯ ಕಳೆಯಿತು. ಅಮ್ಮ ಆಸ್ಪತ್ರೆಯೊಂದರಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ರೋಗಿಗಳ ಶೌಚವನ್ನು ಸ್ವಚ್ಛಗೊಳಿಸುವ ಕೆಲಸ ಮಾಡ್ತಿದ್ದರು. ಅಮ್ಮನ ಸಂಬಳವೇ ನಮಗೆ ಆಧಾರವಾಗಿತ್ತು ಎಂದು ಹೇಳಿ ರಾಖಿ ಸಾವಂತ್ ಕಣ್ಣೀರು ಹಾಕಿದ್ದಾರೆ.

Comments are closed.