ಮನೋರಂಜನೆ

10 ದಿನದ ಮೊದಲೇ ಅಂಬರೀಶ್ ಪ್ರಥಮ ವರ್ಷದ ಪುಣ್ಯತಿಥಿ

Pinterest LinkedIn Tumblr


ಬೆಂಗಳೂರು:ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್, ಮಾಜಿ ಸಚಿವ ದಿ.ಅಂಬರೀಶ್ ಅವರ ಪ್ರಥಮ ವರ್ಷದ ಪುಣ್ಯತಿಥಿ ಗುರುವಾರ ನಡೆಯಿತು. ಪತ್ನಿ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಹಾಗೂ ಕುಟುಂಬಸ್ಥರು ಅಂಬಿ ಸಮಾಧಿಗೆ ಭೇಟಿ ನೀಡಿ ವರ್ಷದ ಪುಣ್ಯ ತಿಥಿ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ರೆಬೆಲ್ ಸ್ಟಾರ್ ಅಭಿಮಾನಿಗಳು, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಹಲವಾರು ಗಣ್ಯರು ಅಂಬಿ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪುಣ್ಯ ತಿಥಿಯ ಹಿನ್ನೆಲೆಯಲ್ಲಿ ಅಂಬರೀಶ್ ಅವರಿಗೆ ತುಂಬಾ ಪ್ರಿಯವಾದ ಬಿರಿಯಾನಿ, ಕೀರು, ಉಪ್ಪಿಟ್ಟು ಇಟ್ಟು ಪೂಜೆ ನೆರವೇರಿಸಿದ್ದರು. ಅಂಬರೀಶ್ ಅಗಲಿಕೆ ನೆನಸಿಕೊಂಡು ಸುಮಲತಾ ಅವರು ಕಣ್ಣೀರು ಹಾಕಿದರು. ಅವರನ್ನು ನಾನೊಬ್ಬಳೇ ಅಲ್ಲ ಚಿತ್ರರಂಗದವರು, ಗೆಳೆಯರು, ಅಭಿಮಾನಿಗಳೂ ಕೂಡಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಕಿಡ್ನಿ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಅಂಬರೀಶ್ ಅವರು 2018ರ ನವೆಂಬರ್ 24ರಂದು ರಾತ್ರಿ ವಿಧಿವಶರಾಗಿದ್ದರು. ನಿನ್ನೆ ನಗರದ ಅರಮನೆ ಮೈದಾನದಲ್ಲಿ ಅಂಬಿ ಪುಣ್ಯ ತಿಥಿ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಭೋಜನ ಕೂಟ ಏರ್ಪಡಿಸಲಾಗಿತ್ತು.

ಹತ್ತು ದಿನದ ಮೊದಲೇ ಪುಣ್ಯ ತಿಥಿ:

ಕಳೆದ ವರ್ಷ ನವೆಂಬರ್ 24ರಂದು ರೆಬೆಲ್ ಸ್ಟಾರ್ ಅಂಬರೀಶ್ ಅವರು ನಿಧನರಾಗಿದ್ದು. ಅಂಬಿ ಅವರು ನಿಧನರಾಗಿ ಸೆ.24ಕ್ಕೆ ಒಂದು ವರ್ಷವಾಗುತ್ತದೆ. ಆದರೆ ಹತ್ತು ದಿನಗಳ ಮೊದಲೇ ಪುಣ್ಯತಿಥಿ ಆಚರಿಸಿದ್ದೇಕೆ ಎಂಬ ಬಗ್ಗೆ ಸ್ವತಃ ಪತ್ನಿ ಸುಮಲತಾ ಅಂಬರೀಶ್ ಅವರು ನೀಡಿರುವ ವಿವರಣೆ ಹೀಗಿದೆ… ವರ್ಷ ತುಂಬುವುದರೊಳಗೆ ಪುಣ್ಯ ತಿಥಿ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಮತ್ತು ಅಂಬರೀಶ್ ಅವರ ಜನ್ಮ ನಕ್ಷತ್ರದ ಪ್ರಕಾರ 10 ದಿನಗಳ ಮೊದಲೇ ಪುಣ್ಯತಿಥಿ ಕಾರ್ಯ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ಮಾರಕ ನಿರ್ಮಾಣ ವಿಳಂಬ:

ನಟ ದಿ.ಅಂಬರೀಶ್ ಅವರ ಸ್ಮಾರಕ ಕಾರ್ಯ ನಡೆಯಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಆದರೆ ರಾಜ್ಯ ಸರ್ಕಾರ ಬದಲಾದ ಕಾರಣ ಸ್ಮಾರಕ ನಿರ್ಮಾಣ ಕೆಲಸ ವಿಳಂಬವಾಗುತ್ತಿದೆ. ಈ ಬಗ್ಗೆ ಫಿಲ್ಮ್ ಚೇಂಬರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದು ಸುಮಲತಾ ಈ ಸಂದರ್ಭದಲ್ಲಿ ಹೇಳಿದರು.

Comments are closed.