ಮನೋರಂಜನೆ

ಮದುವೆ ಆಮಂತ್ರಣ ಪತ್ರಿಕೆ ವೈರಲ್: ಲಂಡನ್‍ಗೆ ತೆರಳಿದ ರಣ್‍ಬೀರ್-ಆಲಿಯಾ

Pinterest LinkedIn Tumblr


ಮುಂಬೈ: ಬಾಲಿವುಡ್ ಕ್ಯೂಟ್ ಕಪಲ್ ರಣ್‍ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಇಬ್ಬರು ಲಂಡನ್‍ಗೆ ತೆರಳಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಆಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ರಣ್‍ಬೀರ್ ಹಾಗೂ ಆಲಿಯಾ ಲಂಡನ್‍ನಲ್ಲಿ ಒಟ್ಟಿಗೆ ರಜೆಯನ್ನು ಕಳೆಯುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ರಣ್‍ಬೀರ್ ಹಾಗೂ ಆಲಿಯಾ ಒಟ್ಟಿಗಿರುವ ಫೋಟೋ ನೋಡಿದ ಅಭಿಮಾನಿಗಳು ಇಬ್ಬರು ಲಂಡನ್‍ನಲ್ಲಿ ಮದುವೆ ಆಗುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ಇತ್ತೀಚೆಗೆ ರಣ್‍ಬೀರ್ ಹಾಗೂ ಆಲಿಯಾ ಮದುವೆ ಕಾರ್ಡ್ ವೈರಲ್ ಆಗಿತ್ತು.

ಆಮಂತ್ರಣ ಪತ್ರಿಕೆಯಲ್ಲಿ ಕಪೂರ್ ಹಾಗೂ ಭಟ್ ಕುಟುಂಬದವರ ಹೆಸರಿದ್ದು, ಜೊತೆಗೆ ಅದರಲ್ಲಿ ಮದುವೆ ಆಗುವ ಸ್ಥಳ ಹಾಗೂ ದಿನಾಂಕ ಕೂಡ ಉಲ್ಲೇಖಿಸಲಾಗಿತ್ತು. ಈ ಆಮಂತ್ರಣ ಪತ್ರಿಕೆಯಲ್ಲಿ ಜನವರಿ 22, 2020ರಂದು ಜೋಧಪುರ್‍ನ ಉಮೇದ್ ಭವನದಲ್ಲಿ ರಣ್‍ಬೀರ್ ಹಾಗೂ ಆಲಿಯಾ ಮದುವೆಯಾಗಲಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಆದರೆ ಅಭಿಮಾನಿಗಳು ವೈರಲ್ ಆಗಿರುವ ಆಮಂತ್ರಣ ಪತ್ರಿಕೆಯನ್ನು ನಕಲಿ ಎಂದು ಹೇಳಿದ್ದರು.

ಆಲಿಯಾ ಭಟ್ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವೇಳೆ ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದ್ದರು. ಆಗ ಆಲಿಯಾ ನಗುತ್ತಾ, ಈಗ ನಾನು ಏನೂ ಹೇಳಲಿ? ಎಂದು ಉತ್ತರ ನೀಡಿ ಅಲ್ಲಿಂದ ಹೊರಟು ಹೋಗಿದ್ದರು. ಈ ಹಿಂದೆ ರಣ್‍ಬೀರ್ ಹಾಗೂ ಆಲಿಯಾ ಮದುವೆ ಆಗಿರುವ ಫೋಟೋವೊಂದು ವೈರಲ್ ಆಗಿತ್ತು. ಮದುವೆ ಜಾಹೀರಾತಿನಲ್ಲಿ ನಟಿಸಿದ ಆಲಿಯಾ ಇರುವ ಫೋಟೋವನ್ನು ರಣ್‍ಬೀರ್ ಅವರನ್ನು ಫೋಟೋಶಾಪ್ ಮಾಡಿ ವೈರಲ್ ಮಾಡಲಾಗಿತ್ತು.

Comments are closed.