ಮನೋರಂಜನೆ

‘ರಾಧಾ ರಮಣ’ ಧಾರಾವಾಹಿಯ ನಟಿ ದೀಪಿಕಾ ಜೊತೆ ತೆಲುಗು ಸ್ಟಾರ್ ನಟನ ಜೊತೆ ಮದುವೆ

Pinterest LinkedIn Tumblr


ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿ ಈಗ ಮುಗಿದಿದೆ. ಈಗ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದ ದೀಪಿಕಾ ಪಾತ್ರಧಾರಿಯ ಅನುಷಾ ಹೆಗ್ಡೆ ತೆಲುಗು ನಟನನ್ನು ಮದುವೆಯಾಗಲಿದ್ದಾರೆ.

ಅನುಷಾ ತೆಲುಗು ಕಿರುತೆರೆ ನಟ ಪ್ರತಾಪ್ ಸಿಂಗ್ ಶಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅನುಷಾ ‘ರಾಧಾ ರಮಣ’ ಧಾರಾವಾಹಿ ಮುಗಿದ ಮೇಲೆ ತೆಲುಗಿನ ‘ನಿನ್ನೆ ಪೆಳ್ಳಾಡಟ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ನಟನ ಜೊತೆ ಅನುಷಾ ಮದುವೆಯಾಗಲಿದ್ದಾರೆ.

ಇತ್ತೀಚೆಗೆ ತೆಲುಗಿನ ಖಾಸಗಿ ವಾಹಿನಿಯಲ್ಲಿ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಗ್ ಶಾ ಅವಾರ್ಡ್ ಸ್ವೀಕರಿಸಿದ ಬಳಿಕ ಅನುಷಾ ಅವರನ್ನು ವೇದಿಕೆ ಮೇಲೆ ಬರಲು ಹೇಳಿದ್ದರು. ಬಳಿಕ ಪ್ರತಾಪ್ ವೇದಿಕೆಯಲ್ಲಿಯೇ ಅನುಷಾ ಬೆರಳಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದರು.

ಪ್ರತಾಪ್ ಸಿಂಗ್ ರಜಪೂತ ಸಮುದಾಯದವರಾಗಿದ್ದು, ಹೈದರಾಬಾದ್‍ನಲ್ಲಿ ವಾಸಿಸುತ್ತಿದ್ದಾರೆ. ಪ್ರತಾಪ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅನುಷಾಗೆ ಮಂಡಿಯೂರಿ ಪ್ರಪೋಸ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅತ್ಯುತ್ತಮ ಕ್ಷಣ ಎಂದು ಬರೆದುಕೊಂಡಿದ್ದಾರೆ.

ಪ್ರತಾಪ್‍ರನ್ನು ಮದುವೆಯಾಗುವ ಮೂಲಕ ಮಂಗಳೂರಿನ ಬೆಡಗಿ ಅನುಷಾ ಹೈದರಾಬಾದ್‍ನ ರಜಪೂತ ಮನೆತನದ ಸೊಸೆ ಆಗಲಿದ್ದಾರೆ. ಪ್ರತಾಪ್ ಸಿಂಗ್ ತೆಲುಗು ಕಿರುತೆರೆಯಲ್ಲಿ ಸ್ಟಾರ್ ನಟನಾಗಿದ್ದು, ‘ನಿನ್ನೆ ಪೆಳ್ಳಾಡಟ’ ಧಾರಾವಾಹಿಯಲ್ಲಿ ನಟಿಸುವಾಗ ಇಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅನುಷಾ ಹಾಗೂ ಪ್ರತಾಪ್ ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ಧಾರಾವಾಹಿ ತಂಡದ ಜೊತೆ ಹಂಚಿಕೊಂಡಿರಲಿಲ್ಲ. ತಮ್ಮ ಪ್ರೀತಿ ವಿಷಯವನ್ನು ಇಬ್ಬರು ಗುಟ್ಟಾಗಿ ಇಟ್ಟಿದ್ದರು. ಶೀಘ್ರದಲ್ಲೇ ಅನುಷಾ ಹಾಗೂ ಪ್ರತಾಪ್ ಅವರ ಎಂಗೇಜ್‍ಮೆಂಟ್ ನಡೆಯಲಿದ್ದು. ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Comments are closed.