ಮನೋರಂಜನೆ

ಚಿರಂಜೀವಿ, ಅಮಿತಾಭ್ ಬಚ್ಚನ್, ಸುದೀಪ್ ನಟನೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾದ ಅಬ್ಬರ ಹೇಗಿದೆ ಗೊತ್ತಾ..?

Pinterest LinkedIn Tumblr


ಬೆಂಗಳೂರು: ಮೆಗಸ್ಟಾರ್ ಚಿರಂಜೀವಿ, ಬಿಗ್ ಬಿ ಅಮಿತಾ ಬಚ್ಚನ್, ಕಿಚ್ಚ ಸುದೀಪ್ ಸೇರಿದಂತೆ ಬಹುತಾರಾಂಗಣ ಅಭಿನಯದ ಸೈರಾ ಸಿನಿಮಾ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದೆ.

ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಧ್ಯರಾತ್ರಿಯೇ ಗ್ರ್ಯಾಂಡ್‌ ರಿಲೀಸ್‌ ಆಗಿದ್ದು ಪ್ರೇಕ್ಷಕರು ಸೈರಾ ಅಬ್ಬರಕ್ಕೆ ಫುಲ್‌ ಫಿದಾ ಆಗಿದ್ದಾರೆ.

ಒಂದೊಂದು ಸೀನ್‌ ಅದ್ಭುತವಾಗಿ ಮೂಡಿಬಂದಿದ್ದು, ಬ್ಲಾಕ್ ಬಸ್ಟರ್‌ ಹಿಟ್ ಗ್ಯಾರಂಟಿ ಅಂತ ಹೇಳಲಾಗ್ತಿದೆ. ಇನ್ನು ಮಧ್ಯರಾತ್ರಿಯೇ ಅಭಿಮಾನಿಗಳಿಂದ ಮೆಗಸ್ಟಾರ್ ಚಿರಂಜೀವಿ ಕಟೌಟ್‌ಗೆ ಹಾಲಿನ ಅಭಿಷೇಕ, ಕಟೌಟ್‌ ಪಲ್ಲಕಿ ನಡೀತು. ಬೆಂಗಳೂರಿನ ಊರ್ವಶಿ ಸೇರಿದಂತೆ ಆಂಧ್ರ, ತೆಲಂಗಾಣದ ಥಿಯೇಟರ್‌ಗಳ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಕುಣಿದು ಕುಪ್ಪಳಿಸಿದರು.

ಇನ್ನು ಕೋಟೆನಾಡು ಚಿತ್ರದುರ್ಗದಲ್ಲೂ ಸೈರಾ ನರಸಿಂಹರೆಡ್ಡಿ ಅಬ್ಬರಿಸಿದ್ದಾನೆ. ಮಧ್ಯರಾತ್ರಿಯಲ್ಲೇ ಸೈರಾ ಚಿತ್ರ ತೆರೆಗಪ್ಪಳಿಸಿದ್ದು, ಮೆಗಾಸ್ಟಾರ್​​ ಚಿರಂಜೀವಿ ಅಭಿಮಾನಿಗಳು ಚಿತ್ರವನ್ನು ಕಣ್ತುಂಬಿಕೊಂಡರು.

Comments are closed.