ಮನೋರಂಜನೆ

ಕೆಜಿಎಫ್-2 ಚಿತ್ರಕ್ಕೆ ಕೋಲಾರ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ

Pinterest LinkedIn Tumblr


ಬೆಂಗಳೂರು: ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ – 2 ಚಿತ್ರಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.

ಚಿತ್ರತಂಡವು ಚಿತ್ರೀಕರಣದ ನೆಪದಲ್ಲಿ ಕೋಲಾರದ ಕೆಜಿಎಫ್ ಪ್ರದೇಶದಲ್ಲಿ ಪರಿಸರ ಹಾಳು ಮಾಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಕೋಲಾರದ ಜೆಎಂಎಫ್ ಸಿ ನ್ಯಾಯಾಲಯದ ಮೆಟ್ಟಿಲೇರಿ ಚಿತ್ರೀಕರಣಕ್ಕೆ ತಡೆಯಾಜ್ಞೆ ತಂದಿದ್ದರು.

ತಡೆಯಾಜ್ಞೆ ವಿರುದ್ಧ ಕೆಜಿಎಫ್ 2 ಚಿತ್ರತಂಡ ಹೈಕೋರ್ಟ್ ಮೆಟ್ಟಿಲೇರಿತ್ತು. ಚಿತ್ರತಂಡದ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಚಿತ್ರೀಕರಣ ಮುಂದುವರಿಸಲು ಅವಕಾಶ ಕಲ್ಪಿಸಿದೆ. ಕೆಜಿಎಫ್ 2 ಪರ ವಕೀಲ ಉದಯ್​ ಹೊಳ್ಳ, ಶಾಂತಿಭೂಷಣ್ ವಾದ ಮಂಡಿಸಿದ್ದರು.

Comments are closed.