ಮನೋರಂಜನೆ

ಮುಖಕ್ಕೆ ಅಂಟು ಮೆತ್ತಿಕೊಂಡು ಸದ್ದು ಮಾಡುತ್ತಿರುವ ಬಾಲಿವುಡ್ ನಟಿ ಕಂಗನಾ..!

Pinterest LinkedIn Tumblr


ಕಂಗನಾ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದ ಹೇಳಿಕೆಗಳು ಹಾಗೂ ಬಾಲಿವುಡ್​ನ ಸಹ ನಟರ ವಿರುದ್ಧ ಕೊಡುವ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ. ಅವರ ಅಭಿನಯದ ‘ಮಣಿಕರ್ಣಿಕಾ’ ಸಿನಿಮಾದ ವಿಷಯದಲ್ಲೂ ಈ ಹಿಂದೆ ಕಂಗನಾ ಕಿರಿಕ್​ ಮಾಡಿಕೊಂಡಿದ್ದರು.

ಅವರು ಸಿನಿಮಾದ ನಿರ್ದೇಶಕರ ಮೇಲೆ ನೀಡಿದ ಹೇಳಿಕೆ, ಅದಕ್ಕೆ ನಿರ್ದೇಶಕರು ಪ್ರತಿಯಾಗಿ ಉತ್ತರಿಸಿದ್ದು, ಸಿನಿಮಾದಲ್ಲಿ ನಿರ್ದೇಶಕರ ಹೆಸರಿನ ಪಟ್ಟಿಯಲ್ಲಿ ಕಂಗನಾ ಹೆಸರು ಬಂದಿದ್ದು ಹಳೆಯ ಸುದ್ದಿ. ಅದರಲ್ಲೂ ಆ ಸಿನಿಮಾಗಾಗಿ ಕುದುರೆ ಸವಾರಿ ಕಲಿತಿರುವುದಾಗಿ ಹೇಳಿಕೊಂಡಿದ್ದ ಕಂಗನಾ ಡಮ್ಮಿ ಕುದುರೆ ಏರಿ ಚಿತ್ರೀಕರಣ ಮಾಡಿದ್ದ ವಿಡಿಯೋ ಆಗ ಟ್ರಾಲ್​ ಆಗಿತ್ತು.

ಈಗ ಅವರು ತಮ್ಮ ಮುಖಕ್ಕೆ ಅಂಟು ಮೆತ್ತಿಕೊಂಡು ಮಾಡುತ್ತಿರುವ ಪ್ರಯೋಗದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹೌದು, ಕಂಗನಾ ಜಯಲಲಿತಾ ಅವರ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅದಕ್ಕಾಗಿ ಅವರು ಇಷ್ಟೆಲ್ಲ ಕಷ್ಟಪಡುತ್ತಿದ್ದಾರೆ.

‘ತಲೈವಿ’ ಸಿನಿಮಾದಲ್ಲಿ ಅಭಿನಯಿಸಲಿರುವ ಕಂಗನಾ ಆ ಪಾತ್ರಕ್ಕಾಗಿ ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮುಖಕ್ಕೆ ಪ್ರೊಸ್ತೆಟಿಕ್ಸ್​ ಗಮ್ (ಮೇಕಪ್​ಗೆ ಸಂಬಂಧಿಸಿದ ಅಂಟು) ​ ಅನ್ನು ಮುಖ ಹಾಗೂ ಮೈಗೆ ಮೆತ್ತುಕೊಂಡು ಪಾತ್ರಕ್ಕೆ ಅಗತ್ಯವಿರುವ ದೇಹದ ಮೇಲೆ ಹೊದಿಸುವ ಕೃತಕ ಭಾಗ ಸಿದ್ಧಪಡಿಸಲು ಸಹಕರಿಸುತ್ತಿದ್ದಾರೆ.

ಈ ವಿಷಯವನ್ನು ಕಂಗನಾ ತಂಗಿ ರಂಗೋಲಿ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ನಟಿಯಾಗುವುದು ಅಷ್ಟು ಸುಲಭವಲ್ಲ ಎಂದು ಬರೆದುಕೊಂಡಿದ್ದಾರೆ.

ರಂಗೋಲಿ ಪೋಸ್ಟ್​ ಮಾಡಿತುವ ಈ ಟ್ವೀಟ್​ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಇದಕ್ಕೆ ಮೆಚ್ಚುಗೆ ಸೂಚಿಸಿದರೆ, ಮತ್ತೆ ಕೆಲವರು ಇದನ್ನು ಈ ಹಿಂದೆ ಸಾಕಷ್ಟು ನಟರು ಮಾಡಿದ್ದಾರೆ. ಇದು ಕಂಗನಾ ಮಾತ್ರ ಮಾಡುತ್ತಿರುವುದಿಲ್ಲ ಎಂದೆಲ್ಲ ಬರೆದಿದ್ದಾರೆ.

‘ಕ್ಯಾಪ್ಟನ್​ ಮಾರ್ವೆಲ್​’ ಹಾಗೂ ‘ಬ್ಲೇಡ್​ ರನ್ನರ್​’ ಸಿನಿಮಾಗಳಲ್ಲಿ ಕೆಲಸ ಮಾಡಿದ ಮೇಕಪ್​ ಕಲಾವಿದರು ‘ತಲೈವಿ’ ಚಿತ್ರದಲ್ಲಿ ಕಂಗನಾ ಲುಕ್ಸ್​ ಮೇಲೆ ಕೆಲಸ ಮಾಡುತ್ತಿದ್ದಾರೆ. ವಿಷ್ಣುವರ್ಧನ್​ ಇಂಧೂರಿ ಹಾಗೂ ಶೈಲೇಶ್​ ಆರ್​. ಸಿಂಗ್ ಈ ಸಿನಿಮಾಗೆ ಹಣ ಹೂಡಿದ್ದು, ದೀಪಾವಳಿಗೆ ಮೈಸೂರಿನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

Comments are closed.